Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪ್ರಧಾನಿ ಮೋದಿ, ಶಾ ಕರ್ನಾಟಕ ಸರ್ಕಾರವನ್ನು ಕೆಡುವಲು ಪ್ಲಾನ್ ಮಾಡಿದ್ದಾರೆ : ಖರ್ಗೆ ಗಂಭೀರ ಆರೋಪ
KARNATAKA

BREAKING : ಪ್ರಧಾನಿ ಮೋದಿ, ಶಾ ಕರ್ನಾಟಕ ಸರ್ಕಾರವನ್ನು ಕೆಡುವಲು ಪ್ಲಾನ್ ಮಾಡಿದ್ದಾರೆ : ಖರ್ಗೆ ಗಂಭೀರ ಆರೋಪ

By kannadanewsnow0516/04/2025 3:26 PM

ಕಲಬುರ್ಗಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ಗಂಭೀರವಾದ ಆರೋಪ ಮಾಡಿದ್ದು, ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅದನ್ನು ಕೆಡವಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.

ಇಂದು ಕಲಬುರ್ಗಿಯಲ್ಲಿ ಯೋಚನೆ ಮಾಡಿದ ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ನಿಮ್ಮ ನಿಮ್ಮ ನಡುವೆ ಏನೇ ಮನಸ್ತಾಪವಿದ್ದರು ಕೂಡ ಒಗ್ಗಟ್ಟಾಗಿ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ. ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಖರ್ಗೆ ಕಿವಿ ಮಾತು ಹೇಳಿದ್ದಾರೆ.

ಹುಷಾರಾಗಿರಬೇಕು ಮೋದಿ ಕರ್ನಾಟಕ ಸರ್ಕಾರ ಬೀಳಿಸುವ ಪ್ಲಾನ್ ಮಾಡಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರಗಳಿವೆ ಯಾವ ರೀತಿಯಾಗಿ ಕೆಡುವ ಬೇಕು ತೆಗೆದು ಹಾಕಬೇಕು ಅಧಿಕಾರ ಕೈಯಲ್ಲಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅದೇ ಪ್ರಯತ್ನ ನಮ್ಮ ಕರ್ನಾಟಕದಲ್ಲಿ ನಡೆದಿದೆ. ನಮ್ಮವರು ಹುಷಾರು ಆಗಿರಬೇಕು ನಿಮ್ಮಲ್ಲಿ ಯಾವುದೇ ಬೇಧ ಭಾವ ಆಗಿರಲಿ ಒಂದಾಗಿರಬೇಕು ಇಲ್ಲವಾದರೆ ಮೋದಿ ಸರ್ಕಾರ ತೆಗೆದುಹಾಕುತ್ತಾರೆ. ಬಡ ಜನರನ್ನು ನುಂಗುತ್ತಾರೆ. ರಕ್ಷಣೆಗಾಗಿ ರಾಜ್ಯದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಹುಷಾರಾಗಿರಿ ಎಂದು ಕಿವಿಮಾತು ಹೇಳಿದ್ದಾರೆ.

ಇನ್ನು ಉದ್ಯೋಗ ಮೇಳದ ಕುರಿತಂತೆ ಮಾತನಾಡಿದ ಅವರು, ಉದ್ಯೋಗ ಮೇಳ ಆಯೋಜನೆ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದು. ಉದ್ಯೋಗ ಮೇಳ ಆಯೋಜಿಸಿರುವುದು ರಾಜ್ಯಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಮಹಾನಗರ ಪಾಲಿಕೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಯ ಕೆಸಿಟಿ ಕಾಲೇಜು ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ( ಯುವ ಸಮೃದ್ದಿ ಸಮ್ಮೇಳನ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಕೌಶಲ್ಯಾಭಿವೃದ್ದಿ ಸಚಿವರಾಗಿದ್ದಾಗ ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರಗಳನ್ನು ಜರ್ಮನ್ ಸಹಯೋಗದಲ್ಲಿ ತೆರಯಲು ಜರ್ಮನ್ ಚಾನ್ಸಲರ್ ಮಾರ್ಕಲ್ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದಕ್ಕೆ ಅವರು ಒಪ್ಪಿದ್ದರಿಂದ ಒಂದು ಬೆಂಗಳೂರಿನಲ್ಲಿ ಮತ್ತೊಂದು ಕಲಬುರಗಿ ಯಲ್ಲಿ ಸ್ಥಾಪಿಸಲಾಗಿತ್ತು.ಅಲ್ಲಿ ತರಬೇತಿ ಪಡೆದವರಲ್ಲಿ ಸಾವಿರಾರು ಜನರು ಉದ್ಯೋಗ ಪಡೆದಿದ್ದಾರೆ.

ಕೈಗಾರಿಕಾ ಸಚಿವರಾಗಿದ್ದಾಗ ಜಿಟಿಟಿಸಿ ಕೇಂದ್ರ ಸ್ಥಾಪಿಸಿದೆ.ಜಿಟಿಟಿಸಿ ಕೇಂದ್ರದಲ್ಲಿ ಸರ್ಟಿಫಿಕೇಟ್ ಪಡೆದವರಿಗೆ ದೇಶದ ಯಾವುದೇ ಭಾಗದಲ್ಲಿ ಕೆಲಸ ಸಿಗುತ್ತದೆ. ಕಾರ್ಮಿಕ ಸಚಿವರಾಗಿದ್ದಾಗ ಐಟಿಐ ಸ್ಥಾಪನೆ ಮಾಡಿದೆ 1952-2009 ರವರೆಗೆ 5,000 ಐಟಿಐ ಕಾಲೇಜುಗಳಿದ್ದವು. ಮತ್ತಷ್ಟು ಐಟಿಐ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೂರು ಐಟಿಐ ಕೊಟ್ಟರು. ಅಂದಿನ ಕೇಂದ್ರಗಳಲ್ಲಿ‌ ಶೀಫ್ಟ್ ಆಧಾರದ ಮೇಲೆ ತರಬೇತಿ ನೀಡಲಾಗುತ್ತಿತ್ತು. ನನ್ನ ಅವಧಿಯಲ್ಲಿ ಸಿಂಗಲ್ ವಿಂಡೋ ಸ್ಥಾಪನೆ ಮಾಡಿ ಕುಶಲ ಕಾರ್ಮಿಕರ ಸಂಖ್ಯೆ ಹೆಚ್ಚಳ ಮಾಡಲು ಲಕ್ಷಾಂತರ ಜನರಿಗೆ ತರಬೇತಿ‌ ನೀಡಲಾಗಿತ್ತು ಎಂದು ನೆನಪಿಸಿಕೊಂಡರು.

ಕಾರ್ಖಾನೆ ಗಳು ಯುವಕರಿಗೆ ಕೌಶಲ್ಯತೆ ಹೆಚ್ಚಿಸಲು ತರಬೇತಿ ನೀಡಬೇಕು. ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕೇಂದ್ರಗಳಿವೆ. ಯುವಕರು ಅಲ್ಲಿ ತರಬೇತಿ ಪಡೆದುಕೊಳ್ಳಬೇಕು. ಹಾಗಾಗಿ ಅಂತಹ ಯುವಕರು ಕೇವಲ ಪದವಿ ಓದಿದರೆ ಮಾತ್ರ ಕೆಲಸ ಸಿಗುವುದಿಲ್ಲ. ಅದರ ಜೊತೆಗೆ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವ ತರಬೇತಿ ಹೊಂದಿದಾಗ ಮಾತ್ರ ಕೆಲಸ ಸಿಗುತ್ತವೆ. ಅಂತಹ ತರಬೇತಿ ಕೇಂದ್ರಗಳನ್ನು ಕಾಂಗ್ರೆಸ್ ಅವಧಿಯಲ್ಲಿ ತೆರೆಯಲಾಗಿತ್ತೇ ಹೊರತು ಮೋದಿ ಅವಧಿಯಲ್ಲಿ ಅಲ್ಲ ಎಂದು ಕುಟುಕಿದರು.

ಹೈ- ಕ ಭಾಗಕ್ಕೆ ಆರ್ಟಿಕಲ್ 371 ಜಾರಿಗೆ ತರವಲ್ಲಿ ಅಂದಿನ ಗೃಹ ಸಚಿವ ಅಧ್ವಾನಿ ಅಧ್ವಾನ ಮಾಡಿಬಿಟ್ಟಿದ್ದರು. ಆದರೆ ಯುಪಿಎ ಸರ್ಕಾರ ಸದಸ್ಯ ಬಲದ ಬೆಂಬಲವಿಲ್ಲದಿದ್ದರೂ ಕೂಡಾ ಇತರೆ ಸಂಸದರೊಂದಿಗೆ ಮಾತುಕತೆ ನಡೆಸಿ ಆರ್ಟಿಕಲ್ 371(1) ಜಾರಿಗೆ ತಂದಿದೆ.. ಸುಮ್ಮನೆ ಕೂತರೆ ಯಾವುದೂ‌ ಸಿಗುವುದಿಲ್ಲ. ಬಿ.ಆರ್.ಪಾಟೀಲ್ ತರಹ ಆಗಾಗ ಸೌಂಡ್ ಮಾಡುತ್ತಿದ್ದರೆ ಏನಾದರೂ ಸಿಗುತ್ತದೆ. ಯಾವುದೇ ಯೋಜನೆಯಾಗಲಿ ಅದರ ಬಳಕೆ ಮಾಡಿಕೊಳ್ಳಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ದಿಯಾಗಿಲ್ಲ. ಸಿಎಂ, ಡಿಸಿಎಂ ಬಂದಿದ್ದಾರೆ, ಅವರು ಸ್ವಲ್ಪ‌‌ ಮನಸು ಮಾಡಿ‌ ಈ ಭಾಗದ ಕೈಗಾರಿಕೆ ಅಭಿವೃದ್ದಿಗೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಮೋದಿ ನಮ್ಮ ಭಾಗಕ್ಕೆ ಒಳ್ಳೆಯದು ಮಾಡಿಲ್ಲ, ಮಾಡುವುದು ಇಲ್ಲ. ಕಡೇಚೂರಿನಲ್ಲಿ ರೈಲು ಭೋಗಿ ಕಾರ್ಖಾನೆ ತಂದಿದ್ದೇವೆ. ಜಾಗ,‌ನೀರು, ವಿದ್ಯುತ್ ಪುಕ್ಕಟೆಯಾಗಿ ಕೊಟ್ಟಿದ್ದೇವೆ. ಆದರೆ ಮೋದಿ ಅನುದಾನ ಬಿಡುಗಡೆ ಮಾಡಿ ಅಲ್ಲಿ ಕೈಗಾರಿಕೆಗಳ ಅಭಿವೃದ್ದಿ ಯಾಕೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿ, ಈ ಭಾಗದಲ್ಲಿ ರೇಲ್ವೆ ಕಾರ್ಖಾನೆ ಅಭಿವೃದ್ದಿ ಸೇರಿದಂತೆ ಬೇರೆ ಬೇರೆ ಕೈಗಾರಿಕೆಗಳ‌ ಅಭಿವೃದ್ದಿಗೆ ಅವರು‌ ಸಹಕರಿಸಬೇಕು ಎಂದು ಆಗ್ರಹಿಸಿದರು.

ಶ್ರೀನಿವಾಸ ಸರಡಗಿ ಗ್ರಾಮದ ಜನರು ಒಪ್ಪಿಗೆ ಮೇಲೆ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಜಮೀನು ಕೊಟ್ಟಿದ್ದಾರೆ. ಈಗ ನೋಡಿದರೆ ಇಲ್ಲಿ ವಿಮಾನಗಳೇ ಬರುತ್ತಿಲ್ಲ. ವಿಮಾನ ನಿಲ್ದಾಣ ನಮ್ಮ ಸ್ಥಳೀಯ ರೈತರು ಜಾಗ ಕೊಟ್ಟಿದ್ದರಿಂದ ನಿರ್ಮಾಣವಾಗಿದೆ. ಇಲ್ಲಿ ನಿರಂತರ ವಿಮಾನ ಸೇವೆ ಒದ…

Share. Facebook Twitter LinkedIn WhatsApp Email

Related Posts

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM1 Min Read

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM2 Mins Read

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM2 Mins Read
Recent News

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

05/03/2026 6:08 AM

BREAKING : ಹಿಂದೂ ಮಹಾಸಾಗರದಲ್ಲಿ ಅಮೆರಿಕಾದಿಂದ ಇರಾನ್ `ಯುದ್ಧನೌಕೆ’ ಧ್ವಂಸ : 87 ಯೋಧರ ದುರ್ಮರಣ | WATCH VIDEO

05/03/2026 6:03 AM

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM
State News
KARNATAKA

ನಗಲೇ ಇಲ್ಲ ರಾಣೇಬೆನ್ನೂರು ರತಿ-ಮನ್ಮಥರು: ಉಳಿಯಿತು ₹13 ಲಕ್ಷ ಬಹುಮಾನ !

By kannadanewsnow5705/03/2026 6:08 AM KARNATAKA 1 Min Read

ರಾಣೇಬೆನ್ನೂರು: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದ ‘ಜೀವಂತ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆ’ ಈ ಬಾರಿಯೂ ತೀವ್ರ…

ಪೆಟ್ರೋಲ್ ಕೊರತೆ ವದಂತಿ : ರಾಜ್ಯದ ನಾನಾ ಕಡೆ ಬಂಕ್ ಗಳಲ್ಲಿ ಸವಾರರ ಕ್ಯೂ !

05/03/2026 5:57 AM

ರಾಜ್ಯದ ಜನತೆಗೆ ‘ಕರೆಂಟ್ ಶಾಕ್’: ವಾಣಿಜ್ಯ, ಕೈಗಾರಿಕಾ ‘ವಿದ್ಯುತ್ ದರ’ ಭಾರೀ ಏರಿಕೆ | Electricity Price Hike

05/03/2026 5:53 AM

ರಾಜ್ಯದಲ್ಲಿ `SSLC’ ಪರೀಕ್ಷೆ : ವಿದ್ಯಾರ್ಥಿಗಳ ಭಯ ನಿವಾರಿಸಲು ‘ಸಹಾಯವಾಣಿ’ ಆರಂಭ !

05/03/2026 5:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.