ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಥೈಲ್ಯಾಂಡ್ ಗೆ ತೆರಳಿದರು. ಈ ಸಮಯದಲ್ಲಿ, ಅವರು ಥೈಲ್ಯಾಂಡ್ ಪ್ರಧಾನಿ ಪಟೊಂಗ್ಟಾರ್ನ್ ಶಿನವಾತ್ರ ಅವರೊಂದಿಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಮತ್ತು 6 ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ
ಪ್ರಧಾನಿ ಮೋದಿ ಅವರಿಗೆ ಥೈಲ್ಯಾಂಡ್ನಲ್ಲಿ ಭಾರತೀಯ ಸಮುದಾಯವು ಭವ್ಯ ಸ್ವಾಗತ ನೀಡಲಿದೆ. ಅವರು ಸರ್ಕಾರಿ ಭವನದಲ್ಲಿ ಶಿನವಾತ್ರಾ ಅವರನ್ನು ಭೇಟಿಯಾಗಲಿದ್ದು, ಅಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುವುದು. ಗುರುವಾರ ಸಂಜೆ ಪ್ರಧಾನಿ ಮೋದಿ ಅವರು ಬಿಮ್ಸ್ಟೆಕ್ ನಾಯಕರೊಂದಿಗೆ ಕಡಲ ಸಹಕಾರದ ಒಪ್ಪಂದಕ್ಕಾಗಿ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಮತ್ತು ಶ್ರೀಲಂಕಾಕ್ಕೆ ಎರಡು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟ್ವೀಟ್ ಮಾಡಿದ್ದಾರೆ. ಪ್ರಧಾನಮಂತ್ರಿಯವರು ಥೈಲ್ಯಾಂಡ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ ಮತ್ತು 6ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅವರು ಶ್ರೀಲಂಕಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ