Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅದಾನಿ ವಿರುದ್ಧ ಅಮೇರಿಕಾದ ತನಿಖೆ: ಪ್ರಧಾನಿಗೆ ಟ್ರಂಪ್ ಎದುರು ನಿಲ್ಲಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

06/08/2025 1:00 PM

BREAKING : ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ!

06/08/2025 12:57 PM

ಸಾರ್ವಜನಿಕರೇ ಗಮನಿಸಿ : ನಿಮ್ಮ ಸಮಸ್ಯೆಗಳನ್ನು `ಮುಖ್ಯಮಂತ್ರಿ’ಗಳ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ.!

06/08/2025 12:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿಯಲ್ಲಿ `ಕರ್ತವ್ಯ ಭವನ’ ಉದ್ಘಾಟಿಸಿದ ಪ್ರಧಾನಿ ಮೋದಿ : ಇದರ ವಿಶೇಷತೆ ತಿಳಿಯಿರಿ | WATCH VIDEO
INDIA

BREAKING : ದೆಹಲಿಯಲ್ಲಿ `ಕರ್ತವ್ಯ ಭವನ’ ಉದ್ಘಾಟಿಸಿದ ಪ್ರಧಾನಿ ಮೋದಿ : ಇದರ ವಿಶೇಷತೆ ತಿಳಿಯಿರಿ | WATCH VIDEO

By kannadanewsnow5706/08/2025 12:41 PM

ನವದೆಹಲಿ : ಪ್ರಧಾನಿ ಮೋದಿ ಕರ್ತವ್ಯ ಭವನ ಉದ್ಘಾಟಿಸಿದರು. 1.5 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಇದು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ದೆಹಲಿಯಾದ್ಯಂತ ಹರಡಿರುವ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ ಮೂಲಕ ದಕ್ಷತೆ, ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸಲು ಕರ್ತವ್ಯ ಭವನವನ್ನು ವಿನ್ಯಾಸಗೊಳಿಸಲಾಗಿದೆ.

ಇದು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, MSME, DoPT, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು/ಇಲಾಖೆಗಳು ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ (PSA) ಕಚೇರಿಗಳನ್ನು ಹೊಂದಿರುತ್ತದೆ.

ಏನಿದರ ವಿಶೇಷತೆ?
ಇದು ಎರಡು ನೆಲಮಾಳಿಗೆಗಳು ಮತ್ತು ಏಳು ಹಂತಗಳಲ್ಲಿ (ನೆಲ + 6 ಮಹಡಿಗಳು) ಸುಮಾರು 1.5 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಅತ್ಯಾಧುನಿಕ ಕಚೇರಿ ಸಂಕೀರ್ಣವಾಗಲಿದೆ. ಇದು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, ಎಂ.ಎಸ್.ಎಂ.ಇ., ಡಿ.ಒ.ಪಿ.ಟಿ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿ.ಎಸ್.ಎ.) ಸಚಿವಾಲಯಗಳು/ಇಲಾಖೆಗಳ ಕಚೇರಿಗಳನ್ನು ಹೊಂದಿರುತ್ತದೆ.

ಹೊಸ ಕಟ್ಟಡವು ಐಟಿ-ಸಿದ್ಧ ಮತ್ತು ಸುರಕ್ಷಿತ ಕೆಲಸದ ಸ್ಥಳಗಳು, ಐಡಿ ಕಾರ್ಡ್ ಆಧಾರಿತ ಪ್ರವೇಶ ನಿಯಂತ್ರಣಗಳು, ಸಂಯೋಜಿತ ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ಒಳಗೊಂಡ ಆಧುನಿಕ ಆಡಳಿತ ಮೂಲಸೌಕರ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಡಬಲ್-ಗ್ಲೇಜ್ಡ್ ಮುಂಭಾಗಗಳು, ಮೇಲ್ಛಾವಣಿ ಸೌರಶಕ್ತಿ, ಸೌರ ಶಕ್ತಿಯ ಮೂಲಕ ಬಿಸಿ ನೀರಿನ ವ್ಯವಸ್ಥೆ, ಸುಧಾರಿತ ಎಚ್.ವಿ.ಎ.ಸಿ.(ತಾಪನ, ವಾತಾಯನ ಮತ್ತು ಹವಾನಿಯಂತ್ರಣ) ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ಒಳಗೊಂಡಿರುವ ಗೃಹ -4 (GRIHA-4) ರೇಟಿಂಗ್ ಗುರಿಯಾಗಿಸಿಕೊಂಡು ನಿರ್ಮಾಣವಾಗಿದ್ದು ಇದು ಸುಸ್ಥಿರತೆಯಲ್ಲಿಯೂ ಮುಂಚೂಣಿಯಲ್ಲಿರಲಿದೆ.

ಇಂಧನ ಬಳಕೆ 30%ರಷ್ಟು ಕಡಿಮೆ ಇರುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.

ಕಟ್ಟಡವನ್ನು ತಂಪಾಗಿಡಲು ಮತ್ತು ಹೊರಗಿನ ಶಬ್ದವನ್ನು ಕಡಿಮೆ ಮಾಡಲು ಇದು ವಿಶೇಷ ಗಾಜಿನ ಕಿಟಕಿಗಳನ್ನು ಹೊಂದಿದೆ. ಇಂಧನ ಉಳಿಸುವ ಎಲ್.ಇ.ಡಿ ದೀಪಗಳು, ಅಗತ್ಯವಿಲ್ಲದಿದ್ದಾಗ ದೀಪಗಳನ್ನು ನಂದಿಸುವಂತಹ (ಆಫ್ ಮಾಡುವ) ಸಂವೇದಕಗಳು, ವಿದ್ಯುತ್ ಉಳಿಸುವ ಸ್ಮಾರ್ಟ್ ಲಿಫ್ಟ್ಗಳು ಮತ್ತು ವಿದ್ಯುತ್ ಬಳಕೆಯನ್ನು ನಿರ್ವಹಿಸಲು ಸುಧಾರಿತ ವ್ಯವಸ್ಥೆ – ಇವೆಲ್ಲವೂ ಇಂಧನ/ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತವೆ. ಕರ್ತವ್ಯ ಭವನ – 03 ರ ಛಾವಣಿಯ ಮೇಲಿನ ಸೌರ ಫಲಕಗಳು ಪ್ರತಿ ವರ್ಷ 5.34 ಲಕ್ಷ ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ. ಸೌರ ವಾಟರ್ ಹೀಟರ್ಗಳು ದೈನಂದಿನ ಬಿಸಿನೀರಿನ ಅಗತ್ಯದ ಕಾಲು ಭಾಗಕ್ಕಿಂತ ಹೆಚ್ಚಿನದನ್ನು ಪೂರೈಸುತ್ತವೆ. ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸಹ ಒದಗಿಸಲಾಗಿದೆ.

#WATCH | Prime Minister Narendra Modi inaugurates Kartavya Bhavan at Kartavya Path in Delhi.

Kartavya Bhavan has been designed to foster efficiency, innovation, and collaboration by bringing together various Ministries and Departments currently scattered across Delhi. It will… pic.twitter.com/xT7NYyFfy7

— ANI (@ANI) August 6, 2025

#WATCH | Prime Minister Narendra Modi inaugurates Kartavya Bhavan at Kartavya Path in Delhi.

Kartavya Bhavan has been designed to foster efficiency, innovation, and collaboration by bringing together various Ministries and Departments currently scattered across Delhi. It will… pic.twitter.com/8s0SnZoeBj

— ANI (@ANI) August 6, 2025

 

BREAKING: PM Modi inaugurates `Kartavya Bhavan' in Delhi | WATCH VIDEO
Share. Facebook Twitter LinkedIn WhatsApp Email

Related Posts

ಅದಾನಿ ವಿರುದ್ಧ ಅಮೇರಿಕಾದ ತನಿಖೆ: ಪ್ರಧಾನಿಗೆ ಟ್ರಂಪ್ ಎದುರು ನಿಲ್ಲಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

06/08/2025 1:00 PM1 Min Read

ಬಿಹಾರ ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಆರೋಪ: ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

06/08/2025 12:52 PM1 Min Read

BREAKING: ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

06/08/2025 12:31 PM1 Min Read
Recent News

ಅದಾನಿ ವಿರುದ್ಧ ಅಮೇರಿಕಾದ ತನಿಖೆ: ಪ್ರಧಾನಿಗೆ ಟ್ರಂಪ್ ಎದುರು ನಿಲ್ಲಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

06/08/2025 1:00 PM

BREAKING : ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ!

06/08/2025 12:57 PM

ಸಾರ್ವಜನಿಕರೇ ಗಮನಿಸಿ : ನಿಮ್ಮ ಸಮಸ್ಯೆಗಳನ್ನು `ಮುಖ್ಯಮಂತ್ರಿ’ಗಳ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ.!

06/08/2025 12:56 PM

ಬಿಹಾರ ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಆರೋಪ: ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

06/08/2025 12:52 PM
State News
KARNATAKA

BREAKING : ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ!

By kannadanewsnow0506/08/2025 12:57 PM KARNATAKA 1 Min Read

ಬೆಂಗಳೂರು : ಇಂದು ವಿಕ್ಟೊರಿಯ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧಿಡಿರ್ ಎಂದು ಭೇಟಿ ನೀಡಿದರು. ಬೆಂಗಳೂರಿನ ಕೆಆರ್ ಮಾರ್ಕೆಟ್ ರಸ್ತೆಯಲ್ಲಿರುವ…

ಸಾರ್ವಜನಿಕರೇ ಗಮನಿಸಿ : ನಿಮ್ಮ ಸಮಸ್ಯೆಗಳನ್ನು `ಮುಖ್ಯಮಂತ್ರಿ’ಗಳ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ.!

06/08/2025 12:56 PM

SHOCKING : ಬೆಂಗಳೂರಲ್ಲಿ 13 ವರ್ಷದ ಬಾಲಕನ ಅಪಹರಿಸಿ, ಕೊಲೆಗೈದ ಕೇಸ್ ಗೆ ಬಿಗ್ ಟ್ವಿಸ್ಟ್ : ‘ಲೈಂಗಿಕ ದೌರ್ಜನ್ಯ’ ಎಸಗಿ ಹತ್ಯೆ!

06/08/2025 12:50 PM

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.