ನವದೆಹಲಿ: ಹೆದ್ದಾರಿಗಳಲ್ಲಿ ವಾಹನ ಚಲಾಯಿಸುತ್ತ ಆಯಾಸಗೊಳ್ಳುವ ಚಾಲಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ಹೊಸಸೌಲಭ್ಯ ಘೋಷಿಸಿದ್ದಾರೆ. ಶೀಘ್ರದಲ್ಲೇ ಹೆದ್ದಾರಿಗಳಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು 1000 ಅತ್ಯಾ ಧುನಿಕ ವಿಶ್ರಾಂತಿ ಕೊಠಡಿಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗುವುದು ಎಂದರು.
ರಸ್ತೆ ಸುರಕ್ಷತೆ ಹಾಗೂ ವಾಹನ ಕುರಿತಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ ಪೋದಲ್ಲಿ ಮಾತನಾಡಿದ ಅವರು, ಹೈವೇ ಬದಿ ಸ್ಥಾಪಿಸಲಾಗುವ ವಿಶ್ರಾಂತಿ ಗೃಹಗಳಲ್ಲಿ ಮಲಗುವ ಕೋಣೆ, ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಇರಲಿದೆ. ಇದರಿಂದ ಹೆದ್ದಾರಿ బది ವಿಶ್ರಾಂತಿಗಾಗಿ ಪರದಾಡುವ ಚಾಲಕರಿಗೆ ಸಹಾಯವಾಗಲಿದೆ ಎಂದರು.
ಇದೇ ವೇಳೆ, ಬಿಜೆಪಿ ಸರ್ಕಾರದ 3ನೇ ಅವಧಿಯಲ್ಲಿ ಭಾರತವು ಜಾಗತಿಕವಾಗಿ 3ನೇ ಅತಿದೊಡ್ಡಆರ್ಥಿಕತೆಯಾಗಲಿದೆ ಎಂದರು. ಈ ಮೂಲಕ ಮತ್ತೆ ತಾವು 3ನೇ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿ ದರು. ಭಾರತದಲ್ಲಿ ಅಭಿವೃದ್ಧಿ ಪರ್ವ ಉಂಟಾಗುತ್ತಿದೆ. ನಾವು ಅಟಲ್ ಸುರಂಗದಿಂದ ಅಟಲ್ ಸೇತುವಿನವರೆಗೆ ಸಮುದ್ರ ಮತ್ತು ಪರ್ವತಗಳಿಗೇ ಸಡ್ಡು ಹೊಡೆದು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತಯಶಸ್ಸನ್ನು ಸಾಧಿಸಿದ್ದೇವೆ.
2014ರ ಹಿಂದಿನ ದಶಕದಲ್ಲಿ ಕೇವಲ 12 ಕೋಟಿ ಸಾದಾ ವಾಹನಗಳು ಮತ್ತು 2000 ಎಲೆಕ್ಟಿಕ್ ವಾಹನ ಮಾರಾಟವಾಗಿತ್ತು. ಆದರೆ 2014ರ ನಂತರದ ದಶಕದಲ್ಲಿ 21 ಕೋಟಿ ಸಾದಾ ವಾಹನಗಳು ಮತ್ತು 12 ಲಕ್ಷ ಎಲೆಕ್ನಿಕ್ ವಾಹನಗಳ ಮಾರಾಟವಾಗಿವೆ ಎಂದರು.