ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ 8ನೇ ಬಜೆಟ್ ಅನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ
ಬಜೆಟ್ ಭಾಷಣವು ಸರ್ಕಾರದ ಹಣಕಾಸಿನ ನೀತಿಗಳು, ಆದಾಯ ಮತ್ತು ವೆಚ್ಚ ಪ್ರಸ್ತಾಪಗಳು, ತೆರಿಗೆ ಸುಧಾರಣೆಗಳು ಮತ್ತು ಇತರ ಮಹತ್ವದ ಪ್ರಕಟಣೆಗಳನ್ನು ವಿವರಿಸುತ್ತದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, “ಜಗತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಭಾರತದ ಆರ್ಥಿಕತೆಯು ಬೆಳೆಯುತ್ತಿದೆ ಮತ್ತು ದೇಶವು ಮುಂದೆ ಸಾಗುತ್ತಿದೆ ಎಂಬುದಕ್ಕೆ ದೇಶ ಸಾಕ್ಷಿಯಾಗಿದೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ ಸಂಖ್ಯೆಯ (8 ನೇ) ಬಜೆಟ್ ಅನ್ನು ಮಂಡಿಸಲಿದ್ದಾರೆ ಮತ್ತು ಇದು ಉತ್ತಮ ವಾತಾವರಣವಾಗಲಿದೆ ಎಂದು ನಾನು ಭಾವಿಸುತ್ತೇನೆ.” ಎಂದರು
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ಬಜೆಟ್ ನಿರಂತರವಾಗಿರುತ್ತದೆ ಮತ್ತು ದೇಶದ, ಬಡವರ ಕಲ್ಯಾಣಕ್ಕಾಗಿ ಇರುತ್ತದೆ ಮತ್ತು ‘ವಿಕ್ಷಿತ್ ಭಾರತ್’ ಮಾಡುವ ಸಂಕಲ್ಪದ ಕಡೆಗೆ ಹೊಸ ಮತ್ತು ಬಲವಾದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು.