ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಬ್ರಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಲವು ಗ್ಯಾರಂಟಿ ಯೋಜನೆಗಳನ್ನ ಘೋಷಸಿದರು.
ದೇಶದಲ್ಲಿ ಮೋದಿ ಗ್ಯಾರಂಟಿಗೆ ನೈಜ ಗ್ಯಾರಂಟಿ ದೇವೇಗೌಡರು ಕೂಡ ಗ್ಯಾರಂಟಿ ಬಗ್ಗೆ ಹೇಳಿದ್ದಾರೆ ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಕೌಂಟರ್ ನೀಡಿದ್ದು, ಮೋದಿ ಗ್ಯಾರಂಟಿ ದೇಶದ ಜನರಿಗೆ ಸಹಕಾರಿಯಾಗಿದೆ ಮೋದಿ ಗ್ಯಾರಂಟಿ ಕರ್ನಾಟಕದ ಪ್ರತಿಯೊಬ್ಬರ ಗ್ಯಾರಂಟಿಯಾಗಿದೆ. ಬಿಜೆಪಿ ಸಂಕಲ್ಪ ಪತ್ರ ಭವಿಷ್ಯದಲ್ಲಿ ಪರಿವರ್ತನೆಗೆ ಆಧಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡಯುವಂತಹ ಪ್ರಣಾಳಿಕೆಯಾಗಿದೆ ಎಂದು ಬಿಜೆಪಿ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಹಾಡಿ ಹೋಗಳಿದರು.
ಭಾರತ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕದ ಪ್ರತಿ ಒಬ್ಬ ವ್ಯಕ್ತಿಯ ಜೀವನ ಪರಿವರ್ತನೆಗೆ ನಮ್ಮ ಗ್ಯಾರಂಟಿ ಡಿಜಿಟಲ್ ಇಂಡಿಯಾ ನಮ್ಮ ಬದುಕಿಗೆ ವೇಗ ತಂದು ಕೊಟ್ಟಿದೆ ಇದು ನವ ಭಾರತದ ಲಕ್ಷಣವಾಗಿದೆ. ಎಕ್ಸ್ಪ್ರೆಸ್ ವೇಗಗಳು ಭಾರತದ ಹೆಗ್ಗುತ್ತಾಗಿದೆ ಇವತ್ತೇ ಬಿಜೆಪಿಯ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ ಇದು ಮೋದಿಯ ಗ್ಯಾರಂಟಿ ಆಗಿದೆ.
ಬಡವರಿಗೆ ಮೂರು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಮುಂದಿನ ಐದು ವರ್ಷಗಳ ಕಾಲ ಉಚಿತ ಪಡಿತರ ಸಿಗಲಿದೆ 20 ವರ್ಷ ಮೇಲ್ಪಟ್ಟ ವಯಸ್ಕರಿಗೆ ಆಯುಷ್ಮಾನ್ ಭಾರತ್ ಚಿಕಿತ್ಸೆ ನೀಡಲಾಗುತ್ತಿದೆ ಮೂರು ಕೋಟಿ ಮಹಿಳೆಯರನ್ನ ಲಕ್ಪತಿ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಗ್ಯಾರಂಟಿ ಘೋಷಿಸಿದರು.
ತಾಯಿ ಚಾಮುಂಡೇಶ್ವರಿ ಕಾವೇರಿ ತಾಯಿಗೆ ನಮನ ಎಂದು ಕನ್ನಡದಲ್ಲಿ ಭಾಷಣವನ್ನು ಆರಂಭಿಸಿದ್ದ ಪ್ರಧಾನಿ ಮೋದಿಯವರು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ದೇವೇಗೌಡರಿಗೆ ನಾನು ಅಭಾರಿ ವ್ಯಕ್ತಪಡಿಸುತ್ತಿದ್ದೇನೆ. ಭಾರತದ ರಾಜಕಾರಣದಲ್ಲಿ ಅತಿ ಹಿರಿಯ ರಾಜಕಾರಣಿಯಾಗಿದ್ದಾರೆ ಅವರ ಆಶೀರ್ವಾದ ಪಡೆಯುವುದು ಸೌಭಾಗ್ಯವಾಗಿದೆ ಅವರು ಹೇಳಿರುವುದರಲ್ಲಿ ಕೆಲವೊಂದು ನನಗೆ ಅರ್ಥವಾಗಿದೆ ಎಂದು ತಿಳಿಸಿದರು.