ಗುಜರಾತ್ : ಗುಜರಾತ್ ನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ವಿಮಾನ ಒಂದು ಪತನವಾಗಿದೆ. ಟೇಕಾಫ್ ಆಗುವಾಗ ವಿಮಾನ ತಾಂತ್ರಿಕ ದೋಷದಿಂದ ಪತನವಾಗಿದೆ ಎಂದು ತಿಳಿದುಬಂದಿದೆ.
ಹೌದು ಅಹಮದಾಬಾದ್ ನಿಂದ ಏರ್ ಇಂಡಿಯಾ ವಿಮಾನ ಲಂಡನ್ ಗೆ ತೆರಳುತ್ತಿತ್ತು. ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಗಾಯಾಳುಗಳನ್ನು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್ಪೋರ್ಟ್ ಬಳಿ ವಿಮಾನ ಹೊತ್ತಿ ಉರಿಯುತ್ತಿದೆ.
ವಿಮಾನದಲ್ಲಿ 135 ಪ್ರಯಾಣಿಕರು ಇರುವ ಮಾಹಿತಿ ಇದೆ. ವಿಮಾನದಲ್ಲಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 135 ಪ್ರಯಾಣಿಕರು ಇರುವ ಮಾಹಿತಿ ಇದೆ. ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ಈ ಒಂದು ದುರಂತ ಸಂಭವಿಸಿದ್ದು, ಸಾವು ನೋವಿನ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.