ಪಾಟ್ನಾ : ಪಾಟ್ನಾದಲ್ಲಿ ಭಾರಿ ವಿಮಾನ ದುರಂತ ಒಂದು ತಪ್ಪಿದ್ದು, ವಿಮಾನ ಲ್ಯಾಂಡಿಂಗ್ ವೇಳೆ ಅಪರಿಚಿತ ಲೇಸರ್ ಲೈಟ್ ಎಂದು ಪೈಲೆಟ್ ಗೊಂದಲಕ್ಕೆ ಒಳಗಾಗಿದ್ದಾರೆ. ಲ್ಯಾಂಡಿಂಗ್ ವೇಳೆ ವಿಮಾನವು ಬ್ಯಾಲೆನ್ಸ್ ಕಳೆದುಕೊಂಡಿದೆ. ಆದರೆ ಅದೃಷ್ಟವಶಾತ್ ಪೈಲೆಟ್ ಸಮಯ ಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಹಾಗೂ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದ್ದು ಭಾರಿ ದುರಂತ ಒಂದು ತಪ್ಪಿದೆ.
ಹೌದು ಇಂದು ಪಾಟ್ನಾದಲ್ಲಿ ಈ ಒಂದು ವಿಮಾನ ದುರಂತ ತಪ್ಪಿದೆ. ಫ್ಲೈಟ್ ಲ್ಯಾಡಿಂಗ್ ವೇಳೆ ಲೇಸರ್ ಲೈಟ್ ನಿಂದ ತೊಂದರೆ ಉಂಟಾಗಿದ್ದು, ಲೇಸರ್ ಲೈಟ್ ನಿಂದ ಪೈಲೆಟ್ ಗೊಂದಲಕ್ಕೆ ಒಳಗಾಗಿದ್ದಾರೆ. ಲ್ಯಾಂಡಿಂಗ್ ವೇಳೆ ವಿಮಾನ ಬ್ಯಾಲೆನ್ಸ್ ಕಳೆದುಕೊಂಡಿದೆ ಸಮಸ್ಯೆಯ ನಡುವೆಯೂ ಕೂಡ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ. ಘಟನೆಯನ್ನು ಡಿಜಿಸಿಎ ತನಿಖೆಗೆ ಆದೇಶಿಸಿದ್ದಾರೆ.ಬಿಹಾರದ ಪಾಟ್ನಾ ಪೊಲೀಸರಿಂದ ಅಪರಿಚಿತ ವ್ಯಕ್ತಿಗಾಗಿ ಶೋಧ ಕೈಗೊಂಡಿದ್ದಾರೆ.