ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯ ಪ್ರತಿಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು ಅಲ್ಲದೆ ನೂರಕ್ಕೂ ಅಧಿಕ ಉಗ್ರರನ್ನು ಕೊಂದಿದೆ. ಇದೀಗ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಹರಿಯಾಣದ ಜ್ಯೋತಿ ಮಲ್ಹೋತ್ರಾಳನ್ನು ಅರೆಸ್ಟ್ ಮಾಡಿದ್ದು ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ಭಾರತದ ಸೇನಾ ರಹಸ್ಯಗಳು, ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದ ಆರೋಪದಡಿ ಬಂಧಿತಳಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ ಮತ್ತಷ್ಟು ದೇಶದ್ರೋಹ ಕೃತ್ಯ ಬಯಲಾಗ್ತಿದೆ. ಇದರ ಮಧ್ಯ ಪುರಿ ಮೂಲದ ಯೂಟ್ಯೂಬರ್ ಪ್ರಿಯಾಂಕಾ ಜೊತೆಗೂ ಜ್ಯೋತಿ ನಂಟಿದೆ ಎನ್ನುವ ರಹಸ್ಯ ಈಗ ಬೆಳಕಿಗೆ ಬಂದಿದೆ.
ಒಡಿಶಾದ ಪ್ರಿಯಾಂಕಾ ಸೇನಾಪತಿ ಜೊತೆ ಪುರಿ ದೇಗುಲದ ಸಮಗ್ರ ವಿಡಿಯೋ ಕೂಡ ಮಾಡಿದ್ದಾಳೆ. ಹೀಗಾಗಿ, ಗುಪ್ತ ಇಲಾಖೆ ಅಧಿಕಾರಿಗಳು ಪ್ರಿಯಾಂಕಾಳನ್ನೂ ವಿಚಾರಣೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ 2024ರ ಸೆಪ್ಟೆಂಬರ್‌ನಲ್ಲಿ ಪುರಿಗೆ ಭೇಟಿ ನೀಡಿದ್ದಳು. ಈ ಸಮಯದಲ್ಲಿ ಜಗನ್ನಾಥ ದೇವಾಲಯ ಮತ್ತು ಅದರ ಸುತ್ತಲಿನ ಸರ್ಕಾರಿ ಆವರಣದ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದಳು.
ಜೊತೆಗೆ ಈ ಸ್ಥಳಗಳ ಮಾಹಿತಿ ಸಂಗ್ರಹಿಸಿ ಸೋಷಿಯಲ್ ಮೀಡಿಯಾಗಳ ಮೂಲಕ ಪಾಕಿಸ್ತಾನದ ಕಾರ್ಯಕರ್ತರಿಗೆ ಕಳುಹಿಸಿದ್ದಾಳೆ ಎಂದು ಗುಪ್ತಚರ ಸಂಸ್ಥೆ ಶಂಕಿಸಿದೆ. ಇದೇ ಸಂದರ್ಭದಲ್ಲಿ ಜ್ಯೋತಿ ಪ್ರಿಯಾಂಕಾ ಸೇನಾಪತಿಯನ್ನ ಭೇಟಿಯಾಗಿದ್ದಾಳೆ. ಆಗಿನಿಂದಲೂ ಪ್ರಿಯಾಂಕ ಜೊತೆಗೆ ಸಂಪರ್ಕ ಬೆಳೆದಿತ್ತು ಎಂದು ವರದಿಗಳು ತಿಳಿಸಿವೆ. ಜ್ಯೋತಿ ಬಂಧನ ಮತ್ತು ಪ್ರಿಯಾಂಕಾ ವಿಚಾರಣೆ ಬೆನ್ನಲ್ಲೇ, ಗುಪ್ತಚರ ಸಂಸ್ಥೆಗಳು ಪುರಿ ದೇವಾಲಯದ ಆವರಣದಲ್ಲಿ ಅನುಮಾನಾಸ್ಪದ ಜನರ ಓಡಾಟದ ಬಗ್ಗೆ ನಿಗಾ ವಹಿಸಿವೆ.