ಬೆಂಗಳೂರು : ಆ್ಯಂಕರ್ ಅನುಶ್ರೀ ಅವರು ತಮ್ಮ ಅಭಿಮಾನಿಗಳಿಗೆ ಕೊನೆ ಕೊನೆಗೂ ಸಿಹಿಸುದ್ದಿ ನೀಡಿದ್ದು, ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಈ ನಡುವೆ ಅನುಶ್ರೀ ಮದುವೆಯಾಗಲಿವೆ ಹುಡುಗನ ಫೋಟೋ ವೈರಲ್ ಆಗಿದೆ.
ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ. ಅನುಶ್ರೀ ಹಾಗೂ ರೋಷನ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಆದರೆ ಅನುಶ್ರೀ ಮಾತ್ರ ಮದುವೆ ಬಗ್ಗೆ ಆಗಲಿ, ಮದುವೆ ಆಗಲಿರುವ ಹುಡುಗನ ಬಗ್ಗೆ ಆಗಲಿ ಯಾವುದೇ ಕ್ಲಾರಿಟಿ ಕೊಟ್ಟಿಲ್ಲ.
ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.
ಪ್ರಸಿದ್ಧ ಕನ್ನಡ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಈಗ ಅಧಿಕೃತವಾಗುತ್ತಿದೆ. ಆಗಸ್ಟ್ 28ಕ್ಕೆ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಬೆಂಗಳೂರಿನ ಕಾರ್ಪೋರೇಟ್ ಉದ್ಯೋಗಿಯೊಂದಿಗೆ ಅವರ ವಿವಾಹ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನುಶ್ರೀ ಅವರು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.