ಬೆಂಗಳೂರು : ಬೆಂಗಳೂರಿನಲ್ಲಿ ಪಿಜಿ ಯುವತಿಯೊಬ್ಬಳು ನಗ್ನ lವಾಗಿ ಹಾಡಹಗಲೇ ಯುವತಿ ರಸ್ತೆಯಲ್ಲಿ ಓಡಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಅಕ್ರಮ ಪಿಜಿಗಳಲ್ಲಿ ಅನಾಗರಿಕ ವರ್ತನೆ ಕಂಡುಬಂದಿದ್ದು, ಹಾಡಹಗಲೆ ರಸ್ತೆಯಲ್ಲಿ ಯುವತಿ ನಗ್ನವಾಗಿ ಓಡಾಟ ನಡೆಸಿದ್ದಾಳೆ.
ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಅಕ್ರಮ ಪಿಜಿಗಳ ಪುಂಡಾಟಕ್ಕೆ ಸ್ಥಳೀಯ ಜನರು ಬೇಸತ್ತು ಹೋಗಿದ್ದಾರೆ. ನಗ್ನವಾಗಿ ರಸ್ತೆಯಲ್ಲಿಯೇ ಪಿಜಿ ಯುವತಿ ಓಡಾಡಿದ್ದಾಳೆ. ಬಿಬಿಎಂಪಿ ಮತ್ತು ಬೆಸ್ಕಾಂ ಹಾಗೂ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ. ಸ್ಥಳೀಯ ನಿವಾಸಿಗಳು ದೂರು ನೀಡಿದರು ಕೂಡ ಪಿ ಜಿ ಹಾಗೂ ಯುವತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಮತ್ತು ಪೊಲೀಸರ ವಿರುದ್ಧ ಸ್ಥಳೀಯ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.