ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ದೇಶದಲ್ಲಿ ಇಂಧನ ದರಗಳು ಮತ್ತೊಮ್ಮೆ ಗಗನಕ್ಕೇರಿವೆ. ಸೋಮವಾರ (ಇಂದು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಇದು 4ನೇ ದರ ಏರಿಕೆಯಾಗಿದೆ.
ತಾಜಾ ಮಾಹಿತಿ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಇಂಧನ ದರಗಳು ಈ ಕೆಳಗಿನಂತಿವೆ:
ಪೆಟ್ರೋಲ್: ಪ್ರತಿ ಲೀಟರ್ಗೆ ₹2.61 ಹೆಚ್ಚಳವಾಗಿದ್ದು, ಈ ಮುಂಚೆ ಇದ್ದ ₹99.51 ರಿಂದ ಇದೀಗ ₹102.12 ಕ್ಕೆ ತಲುಪಿದೆ.
ಡೀಸೆಲ್: ಪ್ರತಿ ಲೀಟರ್ಗೆ ₹2.71 ಹೆಚ್ಚಳವಾಗಿದ್ದು, ₹92.49 ರಿಂದ ಇದೀಗ ₹95.20 ಕ್ಕೆ ಏರಿಕೆಯಾಗಿದೆ.
ಕಳೆದ ಮೇ 15 ರಂದು ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಇಂಧನ ದರಗಳನ್ನು ಪರಿಷ್ಕರಿಸಲಾಗಿತ್ತು. ಅದಾದ ಬಳಿಕ ಎಂಟೇ ದಿನಗಳಲ್ಲಿ ಮೂರನೇ ಬಾರಿಗೆ ಅಂದರೆ ಕಳೆದ ಶನಿವಾರವಷ್ಟೇ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ ಸುಮಾರು ₹1 ರಷ್ಟು ಹೆಚ್ಚಿಸಿದ್ದವು. ಇದೀಗ ಸೋಮವಾರ ಮತ್ತೆ ದರ ಏರಿಸಿ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ.
Diesel prices increased by Rs. 2.71 per litre and petrol by Rs. 2.61 per litre. Diesel in Delhi hiked to Rs 95.20 per litre, and Petrol hiked to Rs 102.12.
— ANI (@ANI) May 25, 2026
RSP (Retail Selling Price) of four Metro cities for 25.05.26 are as follows:
MS (petrol) prices
Delhi Rs 102.12 (+2.61)
Kolkata Rs 113.51 (+2.87)
Mumbai Rs 111.21 (+2.72)
Chennai Rs 107.77 (+2.46)High Speed Diesel prices
Delhi Rs 95.20 (+2.71)…
— ANI (@ANI) May 25, 2026








