ಥೈಲ್ಯಾಂಡ್ : ಪ್ಯೂ ಥಾಯ್ ಪಕ್ಷವು ತನ್ನ ಅಧ್ಯಕ್ಷ ಪೆಟೊಂಗ್ಟಾರ್ನ್ ಶಿನವಾತ್ರಾ ಅವರನ್ನು ಥೈಲ್ಯಾಂಡ್ ಹೊಸ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವುದಾಗಿ ಗುರುವಾರ ಪ್ರಕಟಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಸೊರವಾಂಗ್ ಟಿಯೆನ್ ಥಾಂಗ್ ತಮ್ಮ ನಾಮನಿರ್ದೇಶನವನ್ನು ಘೋಷಿಸಿದ ಕೂಡಲೇ, ಜನಪ್ರಿಯ ಫು ಥಾಯ್ ನೇತೃತ್ವದ 11 ಪಕ್ಷಗಳ ಒಕ್ಕೂಟದ ನಾಯಕರು ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅವರು ಸಮ್ಮಿಶ್ರ ಪಾಲುದಾರರಿಗೆ ಧನ್ಯವಾದ ಅರ್ಪಿಸಿದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ಶ್ರೆಟ್ಟಾ ತವಿಸ್ ಅವರನ್ನು ಸಾಂವಿಧಾನಿಕ ನ್ಯಾಯಾಲಯ ಬುಧವಾರ ಅಧಿಕಾರದಿಂದ ವಜಾಗೊಳಿಸಿದೆ. ಶೆಟ್ಟಾ ತವಿಸ್ ಕೇವಲ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿದ್ದರು.