ಬೆಂಗಳೂರು : ಬೆಂಗಳೂರಲ್ಲಿ ಬೈಕ್ ಅಪಘಾತದಲ್ಲಿ ಡೆಹ್ರಾಡೂನ್ ಮೂಲದ ದೀಪಕ್ ಸಾವನನಪ್ಪಿದ್ದಾರೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬಳಿ ರಾತ್ರಿ ಒಂದು ದುರ್ಘಟನೆ ಸಂಭವಿಸಿದೆ. ಮೃತ ದೀಪಕ್ ಖಾಸಗಿ ಕಂಪನಿ ಕೆಲಸ ಮಾಡುತ್ತಿದ್ದರು. ಸ್ನೇಹಿತೆ ರೋಷಣಿ ಜೊತೆಗೆ ಕೋರಮಂಗಲಕ್ಕೆ ದೀಪಕ್ ಹೋಗಿದ್ದರು. ಮಧ್ಯರಾತ್ರಿ ದೇವನಹಳ್ಳಿ ಅಪಾರ್ಟ್ಮೆಂಟ್ ಗೆ ಮರಳುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.
ಮಧ್ಯರಾತ್ರಿ ದೇವನಹಳ್ಳಿ ಅಪಾರ್ಟ್ಮೆಂಟ್ ಗೆ ದೀಪಕ್ ತೆರಳುತ್ತಿದ್ದರು ಈ ವೇಳೆ ವಿಂಡ್ಸರ್ ಮ್ಯಾನರ್ ಬಳಿ ಸ್ಟೆಪ್ಸ್ ಮೇಲೆ ದೀಪಕ್ ಬೈಕ್ ಇಳಿಸಿದ್ದಾರೆ. ಆಯತಪ್ಪಿ ಬುಲೆಟ್ ಬೈಕ್ ನಿಂದ ದೀಪಕ್ ಬಿದ್ದು ತಲೆಗೆ ಪೆಟ್ಟಾಗಿತ್ತು. ದೀಪಕ್ ಗೆಳತಿ ರೋಷಣಿಗೆ ಕಾಲು ಮುರಿದು ಬಿದ್ದು ಒದಾಡುತ್ತಿದ್ದರು. ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡೆಹರಾಡೂನ್ ಮೂಲಕ ದೀಪಕ್ ಸಾವನಪ್ಪಿದ್ದಾರೆ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








