ಬೆಂಗಳೂರು : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ನಡೆದು ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತನು ಒಬ್ಬ ಸಾವನ್ನಪ್ಪಿದ್ದ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಇನ್ನು ಈ ಒಂದು ಸಮಾವೇಶದ ಕುರಿತಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಬಳ್ಳಾರಿಯಲ್ಲಿ ಸಮಾವೇಶಕ್ಕೆ ಇದುವರೆಗೂ ಪರ್ಮಿಷನ್ ಕೊಟ್ಟಿಲ್ಲ. ಅವಕಾಶ ಕೊಡೋ ವಿಚಾರ ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೇವೆ. ಅಲ್ಲಿನ ಸ್ಥಿತಿಗತಿ ನೋಡಿಕೊಂಡು ನೀವು ಅವರಿಗೆ ಪರ್ಮಿಷನ್ ಕೊಡಬೇಕ ಬೇಡ್ವಾ ಅನ್ನೋದನ್ನ ನೀವೇ ತೀರ್ಮಾನ ಮಾಡಿ ಅಂತ ಹೇಳಿದ್ದೇವೆ. ಹಾಗಾಗಿ ಅಲ್ಲಿನ ಸ್ಥಳೀಯ ಪೊಲೀಸರು ಪರ್ಮಿಷನ್ ಕೊಡುವ ವಿಚಾರವಾಗಿ ನಿರ್ಧರಿಸುತ್ತಾರೆ ಎಂದರು.








