ಬೆಂಗಳೂರು : ಬೆಂಗಳೂರಿನ ಬಸವನಗುಡಿಯಲ್ಲಿ ಇಂದಿನಿಂದ ಕಡಲೆಕಾಯಿ ಪರೀಷೆ ಆರಂಭವಾಗಿದ್ದು, ಬಸವನಗುಡಿ ಸರ್ಕಲ್ ಇಂದ ಬಿಎಮ್ಎಸ್ ಕಾಲೇಜಿನವರೆಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ಭಾನುವಾರ ಹಿನ್ನೆಲೆಯಲ್ಲಿ ಕಡಲೆಕಾಯಿ ಪರಿಷೆಯಲ್ಲಿ ಭಾರಿ ಜನಸ್ತೋಮ ಕಂಡುಬಂದಿದ್ದು, ಇಂದಿನಿಂದ ಒಂದು ವಾರದವರೆಗೂ ಕಡಲೆಕಾಯಿ ಪರಿಷೆ ನಡೆಯಲಿದೆ.
ಹೌದು ಐತಿಹಾಸಿಕ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಕಳೆಗಟ್ಟಿದ್ದು, ವಿದ್ಯುತ್ ದೀಪಾಲಂಕಾರಗಳಿಂದ ಜಘಮಘಿಸುತ್ತಿದೆ. ಈಗಾಗಲೇ ಪರಿಷೆ ಪ್ರಾರಂಭವಾಗಲಿದೆ. ಆದರೆ ಎರಡು ದಿನಕ್ಕೂ ಮುಂಚಿತವಾಗಿಯೇ ಜಾತ್ರೆ ಜೋರಾಗಿ ನಡೆಯುತ್ತಿದೆ.
ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್, ಬುಲ್ ಟೆಂಪಲ್ ರಸ್ತೆ, ದೊಡ್ಡಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ರಸ್ತೆಗಳ ಬದಿಗಳಲ್ಲಿ ರಾಶಿರಾಶಿ ಕಡಲೆಕಾಯಿ, ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಇತರೆ ಸಾಮಗ್ರಿಗಳ ವ್ಯಾಪಾರ ಜೋರಾಗಿದೆ.
ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಪರಿಷೆಯ ಸಡಗರ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
ಒಂದು ಸೇರು ಕಡಲೆಕಾಯಿಗೆ 50 ರೂ.ಗಳಿಂದ 60 ರೂ.ಗೆ ಮಾರಾಟವಾಗುತ್ತಿದೆ. ಮಾಗಡಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹೊಸಕೋಟೆ ಸೇರಿದಂತೆ ಇತರೆ ಪ್ರದೇಶಗಳಿಂದ ಕಡಲೆಕಾಯಿಯನ್ನು ತಂದು ಮಾರಾಟ ಮಾಡಲಾಗುತ್ತಿದೆ.ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಕಡಲೆಕಾಯಿ ಬೆಲೆ ತುಸು ಹೆಚ್ಚಾಗಿದೆ. ಇದು ಕರ್ನಾಟಕ ಮಾತ್ರವಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸಹ ಉತ್ತ ಮಳೆ ಬಾರದಿರುವುದರಿಂದ ಬೆಲೆ ತುಸು ಏರಿಕೆಯಾಗಿದೆ.