ಹುಬ್ಬಳ್ಳಿ : ಅವರಿಬ್ಬರೂ 8 ವರ್ಷದಿಂದ ಪರಸ್ಪರವಾಗಿ ಪ್ರೀತಿಸಿ ಮನೆಯವರ ವಿರೋಧದ ನಡುವೆ ಕಳೆದ ಎರಡು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಮನೆಯವರು ಯುವಕನ ಮನೆಗೆ ಬಂದು ಬಲವಂತವಾಗಿ ಯುವತಿಯನ್ನು ಹೊತ್ತೋಯ್ದ ಘಟನೆ ಹುಬ್ಬಳ್ಳಿಯ ಭೈರಿಕೊಪ್ಪದಲ್ಲಿ ನಡೆದಿದೆ.
ಹೌದು ನಿರಂಜನ ಮತ್ತು ಸುಷ್ಮಾ 8 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಈ ಜೋಡಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಪೋಷಕರು ಇಂದು ಯುವತಿಯನ್ನು ಹೊತ್ತೊಯ್ದಿದ್ದಾರೆ. ಪೋಷಕರ ವಿರೋಧದ ನಡುವೆ ಯುವಕ, ಯುವತಿ ಮದುವೆಯಾಗಿ ಬೇರೆಯಾಗಿ ಒಟ್ಟಿಗೆ ಜೀವಿಸುತ್ತಿದ್ದರು. ಆದರೆ ಇಂದು ಪೋಷಕರು ಯುವತಿಯನ್ನು ಹೊತ್ತೋಯ್ದಿರುವ ಘಟನೆ ನಡೆದಿದೆ.
ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ದೂರವಾಗಿ ದಂಪತಿ ವೇದನೆ ಅನುಭವಿಸಿದರು, ಪ್ರಿಯಕರ ಪತಿ ನಿರಂಜನನ್ನು ಬಿಟ್ಟಿರಲಾಗದೆ ಸುಷ್ಮಾ ಮತ್ತೆ ನಿರಂಜನ್ ಮನೆಗೆ ಬಂದಿದ್ದಾಳೆ. ಸುಷ್ಮಾಳ ಹುಡುಕಿಕೊಂಡು ತಂದೆ ಪರಶುರಾಮ್ ನಿರಂಜನ್ ಮನೆಗೆ ಬಂದಿದ್ದಾರೆ. ಸುಷ್ಮಾಳ ಮಾವಂದಿರಾದ ಮಹಾಂತೇಶ್ ಮತ್ತು ಮಂಜುನಿಂದ ದಂಪತಿಗೆ ಧಮ್ಕಿ ಹಾಕಿದ್ದಾರೆ. ಪತಿ ಮನೆಯಲ್ಲಿದ್ದ ಸುಷ್ಮಾಳನ್ನು ಬಲವಂತವಾಗಿ ಹೊತ್ತೊಯ್ದಿದ್ದಾರೆ. ಸುಷ್ಮಾ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ನಿರಂಜನ್ಗೆ ಬೆದರಿಕೆ ಹಾಕಿದ್ದಾರೆ ಸದ್ಯ ನಿರಂಜನ್ ರಕ್ಷಣೆ ಕೋರಿ ಹುಬ್ಬಳ್ಳಿ ಪೋಲೀಸರ ಮೊರೆ ಹೋಗಿದ್ದಾನೆ.