ಶ್ರೀನಗರ : ಜಮ್ಮು ಕಾಶ್ಮೀರದ ಅನಂತ್ ನಾಗನ ಪಹಲ್ಗಾಮ್ ನಲ್ಲಿ ನಿನ್ನೆ ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗುಂಡಿನ ದಾಳಿ ನಡೆಸಿದ್ದರು.ಈ ಒಂದು ಗುಂಡಿನ ದಾಳಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, ಅದರಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇದೀಗ ಈ ಒಂದು ಘಟನೆಯ ಹಿಂದೆ ಪಾಪಿ ಪಾಕಿಸ್ತಾನದ ಕೈವಾಡ ಇರುವುದು ಬಟಾ ಬಯಲಾಗಿದೆ.
ಹೌದು ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೀಗ ಬಯಲಾಗಿದೆ. ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ನಂಟಿರೋದು ಬಟಾ ಬಯಲಾಗಿದೆ. ಘಟನೆ ಹಿಂದೆ ಪಾಕಿಸ್ತಾನದ ಡಿಜಿಟಲ್ ಫೂಟ್ ಪ್ರಿಂಟ್ ಇರೋದು ಪತ್ತೆಯಾಗಿದೆ. ಅಲ್ಲದೇ LTE ಸಂಘಟನೆಯ ಡೆಪ್ಯುಟಿ ಚೀಫ್ ಸೈಫುಲ್ ಕಸೂರಿಯನ್ನು ಪಾಕಿಸ್ತಾನ ಛೂ ಬಿಟ್ಟು ಕಳ್ಳಾಟ ನಡೆಸುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
LET ಉಗ್ರ ಸಂಘಟನೆಯ ಉಗ್ರ ಕಸೂರಿ ಸೇರಿದಂತೆ ಅನೇಕ ಉಗ್ರರನ್ನು ಇದೀಗ ಪಾಕಿಸ್ತಾನ ಪೋಷಣೆ ಮಾಡುತ್ತಿದೆ. ಅಲ್ಲದೇ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಕೈವಾಡ ಇದೆ ಎನ್ನಲಾಗಿದ್ದು, ಸದ್ಯ ಸೈಫುಲ್ಲ ಕಸೂರಿ ಪಾಕಿಸ್ತಾನದ ಗುಜರಾವಾಲದಲ್ಲಿ ಇದ್ದಾನೆ ಎಂದು ಸದ್ಯ ಮಾಹಿತಿ ತಿಳಿದು ಬಂದಿದೆ.








