ನವದೆಹಲಿ : ಪಹಾಲ್ಗಾಮ್ ಉಗ್ರರ ದಾಳಿ ನಡೆದ ಬೆನ್ನಲ್ಲೆ, ನಿನ್ನೆ 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಯೋಧ ಪಿ.ಕೆ ಸಿಂಗ್ ಅವರು ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ್ದಾರೆ. ಇನ್ನೂ ಇದನ್ನು ಕಂಡ ಪಾಕಿಸ್ತಾನ ರೇಂಜರ್ಸ್ ಪಿ.ಕೆ ಸಿಂಗ್ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಅವರ ಸುರಕ್ಷಿತ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ.
182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿಕೆ ಸಿಂಗ್ ಎಂದು ಗುರುತಿಸಲಾದ ಯೋಧ ಭಾರತ ಹಾಗೂ ಪಾಕ್ ಗಡಿಯ ಸಮೀಪವಿರುವ ಕೃಷಿಭೂಮಿಯ ಬಳಿ ಕರ್ತವ್ಯದಲ್ಲಿದ್ದರು. ದಿನನಿತ್ಯದ ಚಲನೆಯ ಸಮಯದಲ್ಲಿ, ಸಿಂಗ್ ಅಜಾಗರೂಕತೆಯಿಂದ ಭಾರತೀಯ ಗಡಿ ಬೇಲಿಯನ್ನು ಮೀರಿ ಪಾಕಿಸ್ತಾನಿ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ.
ಸಿಂಗ್ ಅನ್ನು ಬಂಧಿಸುವಾಗ ಅವರು ಸಮವಸ್ತ್ರದಲ್ಲಿದ್ದರು ಮತ್ತು ಅವರ ಕೈಯಲ್ಲಿ ಸರ್ವಿಸ್ ರೈಫಲ್ ಅನ್ನು ಹಿಡಿದಿದ್ದರು ಎಂದು ಹೇಳಲಾಗಿದೆ. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ರೈತರೊಂದಿಗೆ ಹೋಗುತ್ತಿದ್ದಾಗ ಪಾಕಿಸ್ತಾನಿ ಸೈನಿಕರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಇನ್ನೂ ಪಾಕ್ ರೇಂಜರ್ಸ್ ತುಕಡಿಯಿಂದ BSF ಯೋಧನನ್ನು ವಶಕ್ಕೆ ಪಡೆದು ಹಿಂಸಿಸಲು ಆರಂಭಿಸಿದ್ದಾರೆ. ಗಡಿ ಭದ್ರತಾ ಪಡೆ ಪಿ.ಕೆ ಸಿಂಗ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ ಈ ಬಗ್ಗೆ ಪಾಕಿಸ್ತಾನ ರೇಂಜರ್ಸ್ ಮುಖ್ಯಸ್ಥರ ಜೊತೆ BSF ಮುಖ್ಯಸ್ಥರು ತುರ್ತು ಸಭೆ ನಡೆಸಿದ್ದು, ತಕ್ಷಣವೇ ಭಾರತೀಯ ಯೋಧನನ್ನ ಬಿಡುವಂತೆ ಭಾರತ ಒತ್ತಾಯಿಸಿದೆ.
دیر کی غیور عوام نے خیبر پختونخوا کو ایک بڑی تباہی سے بچا لیا ۔افغانستان کنڑ سے آئے دہشت گرد کو دیر کی عوام نے دھر لیا ۔ pic.twitter.com/TG7R95XLcN
— Harmeet Singh (@HarmeetSinghPk) April 23, 2025