ಬಾಗಲಕೋಟೆ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಂತಹ ಗಲಭೆಯ ಬೆಂಕಿ ಅರುವ ಮುನ್ನವೇ ಇದೀಗ ಬಾಗಲಕೋಟೆಯಲ್ಲಿ ಯುವಕನೊಬ್ಬ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಪಾಕಿಸ್ತಾನದ ಧ್ವಜವಿರುವ ಸ್ಟೇಟಸ್ ಹಾಕಿ ಪುಂಡಾಟ ಮೆರೆದಿದ್ದು, ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ಯುವಕ ತೌಶೀಪ್ ಮೆಹ್ತರ್ ಬಂಧಿತ ಆರೋಪಿ ಎನ್ನಲಾಗಿದ್ದು, ಪಾಕಿಸ್ತಾನ ಪರ ವಾಟ್ಸಾಪ್ ಸ್ಟೇಟಸ್ ಹಾಕಿ ಪುಂಡತನ ಮೆರೆದ ಘಟನೆ ನಡೆದಿದೆ. ಯಾವುದೋ ವಾಹನದ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ವಿಡಿಯೋದ ತುಣುಕನ್ನು ಸ್ಟೇಟಸ್ ಇಟ್ಟುಕೊಂಡು ಪುಂಡಾಟ ಮೆರೆದಿದ್ದಾನೆ.
ಇದೀಗ ತೌಶೀಪ್ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಿಂದೂ ಕಾರ್ಯಕರ್ತರು ಕಿಡಿಕಾರಿದ್ದಾರೆ. ಈ ಹಿನ್ನಲೆ ಎಚ್ಚೆತ್ತ ಕಲಾದಗಿ ಪೊಲೀಸರು ಆರೋಪಿ ತೌಶೀಪ್ನನ್ನು ವಶಕ್ಕೆ ಪಡೆದಿದ್ದಾರೆ.ಮಂಡ್ಯ ಜಿಲ್ಲೆಯ ನಾಗಮಂಗಲದ ಘಟನೆ ಮಾಸುವ ಮುನ್ನವೇ ಇದೀಗ ಬಾಗಲಕೋಟೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು ಹಿಂದೂ ಕಾರ್ಯಕರ್ತರನ್ನು ಕೆರಳಿಸಿದೆ.