ನವದೆಹಲಿ: ಅಕ್ಟೋಬರ್’ನಲ್ಲಿ ಇಸ್ಲಾಮಾಬಾದ್’ನಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ ಸಂಘಟನೆಯ ಮುಖ್ಯಸ್ಥರ ಸಭೆಗೆ ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿಯವರನ್ನ ಆಹ್ವಾನಿಸಿದೆ ಎಂದು ವಿದೇಶಾಂಗ ಕಚೇರಿ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಅಕ್ಟೋಬರ್ 15-16ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೇಶಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
“ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನವನ್ನು ಕಳುಹಿಸಲಾಗಿದೆ” ಎಂದು ಬಲೂಚ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ (SCO) ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸುವುದನ್ನು ಕೆಲವು ದೇಶಗಳು ಈಗಾಗಲೇ ಖಚಿತಪಡಿಸಿವೆ ಎಂದು ಬಲೂಚ್ ಹೇಳಿದರು. ಇನ್ನು “ಯಾವ ದೇಶವು ದೃಢಪಡಿಸಿದೆ ಎಂಬುದನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು” ಎಂದರು.
BREAKING : ‘ರಿಲಯನ್ಸ್ ಷೇರುದಾರ’ರಿಗೆ ಗುಡ್ ನ್ಯೂಸ್ ; ‘1:1 ಬೋನಸ್ ಷೇರು’ ವಿತರಿಸುವುದಾಗಿ ಕಂಪನಿ ಘೋಷಣೆ
BREAKING : ಜಿಯೋ ಬಳಕೆದಾರರಿಗೆ ‘AI-ಕ್ಲೌಡ್ ವೆಲ್ಕಮ್ ಆಫರ್’ ಪರಿಚಯ, ಉಚಿತ ‘100 GB ಸ್ಟೋರೇಜ್’ ಘೋಷಣೆ