ನವದೆಹಲಿ : ಪಾಕಿಸ್ತಾನ ಭಾರತದ ಮೇಲೆ ನಿರಂತರವಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ ಅದಲ್ಲದೆ ಪಾಕಿಸ್ತಾನದ ದಾಳಿಗೆ ಪ್ರತಿಕಾರವಾಗಿ ಭಾರತ ಕೂಡ ಪಾಕಿಸ್ತಾನದ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದೀಗ ಭಾರತದ ಕ್ಷಿಪ್ರ ದಾಳಿಗಳಿಂದ ಪಾಕಿಸ್ತಾನ ನಲುಗಿದ್ದು ಪಾಕಿಸ್ತಾನದ ಚಾಂಬ್ ಹಾಗೂ ಸಿಯಾಲ್ ಕೊಟ್ ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಭಾರತದ ಕ್ಷಿಪ್ರ ದಾಳಿಗಳಿಂದಾಗಿ ಪಾಕಿಸ್ತಾನ ಇದೀಗ ಸಹಜವಾಗಿ ಕಂಗಾಲಾಗಿದೆ. ಪಾಕಿಸ್ತಾನದ ಚಾಂಬ್ ಮತ್ತು ಸಿಯಾಲ್ ಕೋಟ್ ಮೇಲೆ ಭಾರತ ತೀವ್ರ ದಾಳಿ ನಡೆಸಿದೆ. ಭಾರತದ ದಾಳಿಯಿಂದಾಗಿ ಇದೀಗ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಚಾಂಬ್ ಹಾಗೂ ಸಿಯಾಲ್ ಕೋಟ್ ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಯಲ್ಲಿಯೇ ಇರುವಂತೆ ಪಾಕಿಸ್ತಾನ ಸೇನೆ ಅಲ್ಲಿನ ಜನರಿಗೆ ಸೂಚಿಸಿದೆ.