ಶ್ರೀನಗರ : ಇಂದು ಸಂಜೆಯಷ್ಟೇ ಪಾಕಿಸ್ತಾನ ಹಾಗೂ ಭಾರತ ಕದನ ವಿರಾಮ ಘೋಷಿಸಿತ್ತು. ಇದೀಗ ಮತ್ತೆ ಪಾಕಿಸ್ತಾನ ಗಡಿಯಲ್ಲಿ ಬಾಲ ಬಿಚ್ಚಿದ್ದು ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ.
ಹೌದು ಜಮ್ಮು ಕಾಶ್ಮೀರ ರಾಜಧಾನಿ ಶ್ರೀ ನಗರದಲ್ಲಿ 4-5 ಬಾರಿ ಸ್ಪೋಟ ಕೇಳಿಸಿದ್ದು, ಶ್ರೀನಗರದಲ್ಲಿ ಬ್ಲಾಕ್ ಔಟ್ ಮಾಡಲಾಗಿದೆ. ಎಲ್ ಓ ಸಿ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಜಾರಿಯಾದ 3 ಗಂಟೆಗಳಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದೆ. ಅಲ್ಲದೆ ಶ್ರೀನಗರದಲ್ಲಿ 11 ಡ್ರೋನ್ ಗಳಿಂದ ದಾಳಿ ಮಾಡಿದೆ.
ಶ್ರೀನಗರದತ್ತ 50ಕ್ಕೂ ಹೆಚ್ಚು ಪಾಕಿಸ್ತಾನ್ ಡ್ರೋನ್ ಗಳು ನುಗ್ಗಿ ಬಂದಿವೆ. ಸೇನಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿದೆ. ಕಾಶ್ಮೀರ, ರಾಜಸ್ಥಾನ್, ಗುಜರಾತ್ ಪಂಜಾಬ್ ಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡಿದೆ. ಆದರೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಸೂಕ್ತ ಪ್ರತ್ಯುತ್ತರ ನೀಡುವಂತೆ ಭಾರತ ಸರ್ಕಾರ ಬಿಎಸ್ಎಫ್ ಗೆ ಸೂಚನೆ ನೀಡಿದೆ. ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಜಮ್ಮು ಸೆಕ್ಟರ್ ನಲ್ಲಿ ಪಾಕಿಸ್ತಾನದಿಂದ ಆರ್ಟಿಲರಿ ಸೆಲ್ ದಾಳಿ ನಡೆಸಿದೆ. ಅಖ್ನೂರ್, ರಜೌರಿ ಹಾಗು ಆರ್ ಎಸ್ ಪುರ ಸೆಕ್ಟರ್ ನಲ್ಲೂ ಪಾಕಿಸ್ತಾನ ಫೈರಿಂಗ್ ಮಾಡಿದೆ ಪಾಕಿಸ್ತಾನ ಸೇನೆ ದಾಳಿಗೆ ಬಿಎಸ್ಎಫ್ ತಕ ಪ್ರತ್ಯುತ್ತರ ನೀಡಿದೆ.
#WATCH | J&K: Red streaks seen and explosions heard as India's air defence intercepts Pakistani drones amid blackout
(Visuals deferred by unspecified time) pic.twitter.com/i55BjDMMFq
— ANI (@ANI) May 10, 2025