ಬೆಂಗಳೂರು : ನಿನ್ನೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಯಸಿ ತನ್ನ ಪ್ರೀತಿ ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಅಪಾರ್ಟ್ಮೆಂಟ್ ಗೆ ತೆರಳಿ ಅಲ್ಲಿದ್ದ ಯುವತಿಗೆ ತಂದೆಯ ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದ ಘಟನೆ ನಡೆದಿತ್ತು ಇದೀಗ ಈ ಒಂದು ಘಟನೆಗೂ ಮುನ್ನ ಪಾಗಲ್ ಪ್ರೇಮಿ ರಾಹುಲ್ ಯುವತಿಯ ಸಾಕು ತಂದೆಗೆ ಚಾಕು ಇರಿದಿದ್ದ ಎಂದು ಹೇಳಲಾಗುತ್ತಿದೆ.
ಹೌದು ಬೆಂಗಳೂರಿನಲ್ಲಿ ಕಾರುಗಳಿಗೆ ರೌಡಿಶೀಟರ್ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾನು ಪ್ರೀತಿಸುತ್ತಿದ್ದ ಯುವತಿಯ ಸಾಕು ತಂದೆಗೆ ಚಾಕು ಇರಿದಿದ್ದಾನೆ. ಲಕ್ಷ್ಮಿ ನಾರಾಯಣ ಎನ್ನುವವರಿಗೆ ರಾಹುಲ್ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಪ್ರೇಯಸಿ ಹುಡುಕಿಕೊಂಡು ಮನೆಗೆ ಹೋಗಿ ರಾಹುಲ್ ಗಲಾಟೆ ಮಾಡಿದ್ದಾನೆ.
ಈ ವೇಳೆ ಗಲಾಟೆಗೆ ವಿರೋಧ ಮಾಡಿದ್ದ ಸಾಕು ತಂದೆ ಲಕ್ಷ್ಮಿನಾರಾಯಣಗೆ ರಾಹುಲ್ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಲಕ್ಷ್ಮೀನಾರಾಯಣ್ ಎನ್ನುವವರಿಗೆ ಚಾಕು ಇರಿದ ಬಳಿಕ ಹುಚ್ಚು ಪ್ರೇಮಿ ಹಾಗೂ ರೌಡಿಶೀಟರ್ ರಾಹುಲ್ ಬಳಿಕ ಲಕ್ಷ್ಮೀನಾರಾಯಣ ಅವರ ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾನೆ. ಘಟನೆ ಕುಡಿದಂತೆ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.