ಬಾಗಲಕೋಟೆ : ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಗೂಡ್ಸ್ ವಾಹನದ ಮಾಲೀಕನ ಪತ್ನಿ ಜೊತೆಗೆ ಸಲುಗೆಯಿಂದ ಇದ್ದಾನೆ ಎಂದು ಚಾಲಕನನ್ನು ಅಪಹರಿಸಿ ಮನ ಬಂದತ್ತೆ ಥಳಿಸಿ , ಕ್ರೌರ್ಯ ಮೆರೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಚಾಲಕನ ಕೈಕಟ್ಟಿ ಕಾಲುಗಳಿಗೆ ದೊಣ್ಣೆಯಿಂದ ಥಳಿಸಲಾಗಿದೆ.
ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಬಾಗಲಕೋಟೆಯ ತುಳಸಿಗಿರಿ ಗುಡ್ಡದಲ್ಲಿ ಈ ಒಂದು ಹಲ್ಲೆ ನಡೆದಿದೆ. ಗೂಡ್ಸ್ ವಾಹನದ ಚಾಲಕ ಪ್ರಕಾಶ್ ಮೇಲೆ ಮಾಲೀಕ ಯಂಕಪ್ಪ ಮನಬಂದಂತೆ ಥಳಿಸಿದ್ದಾನೆ. ಯಂಕಪ್ಪ ಪತ್ನಿ ಜೊತೆಗೆ ಚಾಲಕ ಪ್ರಕಾಶ್ ಸಲುಗೆಯಿಂದ ಇದ್ದ ಎಂಬ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಚೂರಿಯಿಂದ ಕೂಡ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಒಟ್ಟು 10 ಜನರ ಸೇರಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಚಾಲಕ ಪ್ರಕಾಶ್ ಕಾಲುಗಳೆಲ್ಲ ಊದಿಕೊಂಡಿವೆ.








