ತುಮಕೂರು : ಕಲುಷಿತ ನೀರು ಸೇವಿಸಿ ಸುಮಾರು 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೋರಲಮಾವು ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಕಲುಷಿತ ನೀರು ಸೇವಿಸಿ ಗುಂಡಮ್ಮ (60) ಸಾವನ್ನಪ್ಪಿದ್ದರೆ. ಅಲ್ಲದೆ ಸೋರಲಮಾವು ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.ಇನ್ನು ಘಟನೆಯಲ್ಲಿ ಅಸ್ವಸ್ಥಗೊಂಡಂತಹ ಎಲ್ಲಾ 10 ಜನರನ್ನು ಚಿಕ್ಕನಾಯಕನಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.