ಕಲಬುರ್ಗಿ : ಸಂವಿಧಾನ ಬದಲಾಯಿಸಲು ಹೊರಟವರ ಕೈಗಳನ್ನು ಕತ್ತರಿಸಿ ಅಂತ ಹೇಳಬೇಕಾಗುತ್ತದೆ. ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ ಎಂದು ಕಲಬುರ್ಗಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಹಿರಿಯ ನಟ ಅಶೋಕ್ ಹೇಳಿಕೆ ನೀಡಿದರು.
ಕೆಲವರು ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಅವರದ್ದು ವೈದಿಕ ಸನಾತನ ಧರ್ಮ, ನಮ್ಮದು ನೈತಿಕ ಸನಾತನ ಧರ್ಮ. ಯಾವ ರಾಜಕೀಯ ಪಕ್ಷ ಅಂತ ನಾನು ಹೇಳಲು ಹೋಗಲ್ಲ. ಯಾವ ರಾಷ್ಟ್ರೀಯ ಪಕ್ಷ ಅಂತ ಕೂಡ ನಾನು ಹೇಳಲು ಹೋಗಲ್ಲ. ಇಂತಹ ಸಮಯದಲ್ಲಿ ನಾವು ಮೆರವಣಿಗೆ ಮಾಡಿಕೊಂಡು ಇರಬಾರದು ಹಾಕಿಕೊಂಡು ಇರದೆ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.
2029 ಚುನಾವಣೆಯಲ್ಲಿ ಬಹುಮತ ಪಡೆದು ಸಂವಿಧಾನ ಬದಲಾವಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ನಟ ಅಶೋಕ್ ಹೇಳಿಕೆ ನೀಡಿದರು. ನಮ್ಮವರು ಅಧ್ಯಯನ ಮಾಡಬೇಕು, ಚುನಾವಣೆಯಲ್ಲಿ ನಿಲ್ಲಬೇಕು ಇಲ್ಲ ಅಂದರೆ ತಲೆಯ ಮೇಲೆ ಮಲ ಹೊರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಪರೋಕ್ಷವಾಗಿ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ನಟ ಅಶೋಕ್ ವಾಗ್ದಾಳಿ ನಡೆಸಿದರು.







