ಬೆಂಗಳೂರು : ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗಲಾಟೆ ಹಾಗೂ ಆಯೋಜಕರ ಮೇಲೆ ತೀವ್ರ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ಗಣೇಶ್ ಉತ್ಸವದ ಆಯೋಜಕ ಚಂದನ್ ಮೇಲೆ ಧನುಷ್ ಮತ್ತು ಶತಾಬ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಜವಳಿ ಅಂಗಡಿ ಮುಂದೆ ಜೋರಾಗಿ ತಮಟೆ ಭಾರಿಸಲು ಹೇಳಿದ್ದೀಯಾ ಬೇಕಂತಲೇ ಜೋರಾಗಿ ತಮಟೆ ಬಾರಿಸಲು ಹೇಳಿದ್ದೀಯಾ ಎಂದು ಹಲ್ಲೆ ಮಾಡಿದ್ದಾರೆ.ಸೋಮವಾರ ನಡೆದ ಚಂದ್ರನ್ ಮೇಲೆ ಹಲ್ಲೆ ಕೇಸ್ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಯ ಸಂಬಂಧ ಟಿ ದಾಸರಹಳ್ಳಿ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.