ಮೈಸೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಅನೇಕ ಜನರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದ್ದು ಇಂದು ಅಥವಾ ನಾಳೆ ಸುಗ್ರೀವಾಜ್ಞೆ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್ಚಿನ ಹಣ ವಸೂಲಿ ಮಾಡಲು ಮೈಕ್ರೋ ಫೈನಾನ್ಸ್ ಅಧಿಕಾರ ಕೊಟ್ಟಿದ್ದು ಯಾರು? ಫೈನಾನ್ಸ್ ನವರು ಹೊಸೂರಿಗೆ ಗುಂಡಾರ ರೌಡಿಗಳನ್ನ ಇಟ್ಟುಕೊಳ್ಳುತ್ತಾರೆ. ಪಾಪ ರೌಡಿಗಳ ಕಿರುಕುಳಕ್ಕೆ ಜನರು ಭಯ ಬೀಳುತ್ತಾರೆ.ಇದನ್ನು ತಡೆಗಟ್ಟಲು ಕಾನೂನು ಜಾರಿ ಮಾಡಲಾಗುತ್ತದೆ ಎಂದರು.
ಯಾರು ಸಹ ಭಯ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗೆ ಇದೆ. ನಿಮಗೆ ಏನಾದರೂ ಕಿರುಕುಳ ಕೊಟ್ಟರೆ ಪೊಲೀಸರಿಗೆ ದೂರು ನೀಡಿ. ಅಸಲಿಗಿಂತ ಬಡ್ಡಿ ಜಾಸ್ತಿ ಹಾಕಬಾರದೆಂದು ಕಾನೂನಿನಲ್ಲಿ ಸೇರಿಸುತ್ತೇವೆ. ಎಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.