ಬೆಂಗಳೂರು : ಜುಲೈ ಅಂತ್ಯದ ವರೆಗೆ ತಮಿಳುನಾಡಿಗೆ 1 ಟಿಎಂಸಿ ಕಾವೇರಿ ನೀರು ಹರಿಸುವಂತೆ CWRC ಕರ್ನಾಟಕಕ್ಕೆ ಆದೇಶ ನೀಡಿದ್ದರ ಕುರಿತಾಗಿ ಇಂದು ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆಯಿತು.ಈ ಒಂದು ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ವಿಪಕ್ಷ ನಾಯಕರು,ಸಚಿವರಿಂದ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿಡಬ್ಲ್ಯೂಆರ್‌ಸಿ ಆದೇಶದ ವಿರುದ್ಧ ಸಿಡಬ್ಲ್ಯೂಎಂ ಹೇಗೆ ಮೇಲ್ಮನವಿ ಸಲ್ಲಿಸೋಣ ಎಂದು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸದಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಸರ್ವ ಪಕ್ಷಗಳ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕರಿಂದ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ನೀರಿನ ಕೊರತೆ ಎಷ್ಟಿದೆ ಅನ್ನೋದರ ಬಗ್ಗೆ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹಾರಂಗಿ 76% ರಷ್ಟು ಭರ್ತಿಯಾಗಿದ್ದು, ಹೇಮಾವತಿಯಲ್ಲಿ 56 ರಷ್ಟು ಭರ್ತಿಯಾಗಿದೆ. ಅಲ್ಲದೆ ಕೆ ಆರ್ ಎಸ್ ಡ್ಯಾಮ್ ನಲ್ಲಿ 45% ರಷ್ಟು ಮಾತ್ರ ನೀರು ಬರ್ತಿಯಾಗಿದೆ. ಕಬಿನಿ ಜಲಾಶಯದಲ್ಲಿ ಶೇಕಡ 69 ರಷ್ಟು ಮಾತ್ರ ನೀರು ಭರ್ತಿಯಾಗಿದೆ. ನಿನ್ನೆಯ ಮಾಹಿತಿ ಪ್ರಕಾರ 72.58 ಟಿಎಂಸಿ ನೀರಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರಿಗಳು ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಕೆಜೆ ಜಾರ್ಜ್, ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ವೆಂಕಟೇಶ್ HC ಮಾದೇವಪ್ಪ, ಕೃಷ್ಣ ಭೈರೇಗೌಡ ಎಂ ಎಸ್ ಬೋಸರಾಜು ಇದ್ದರು.
ಅಲ್ಲದೆ ದೆಹಲಿ ಕರ್ನಾಟಕ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ವಿಪಕ್ಷಗಳ ನಾಯಕರದ ಆರ್ ಅಶೋಕ್, ಜಿಟಿ ದೇವೇಗೌಡ, ಸಿಟಿ ರವಿ, ಸಂಸದ ಯದುವೀರ, ಟಿ.ಎ ಶರವಣ ಉಪಸ್ಥಿತಿ ಇದ್ದರು.ಅಲ್ಲದೆ ಎಜಿ ಶಶಿಕುಮಾರ್, ಹಿರಿಯ ವಕೀಲ ಮೋಹನ್ ಕಾತರಕಿ ಭಾಗಿಯಾಗಿದ್ದರು.