ನವದೆಹಲಿ : ಪಲ್ಗಾಂ ನಲ್ಲಿ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಆಪರೇಷನ್ ಸಿಂಧೂರ್ ಮೂಲಕ ನೂರಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಇದೀಗ ಪಾಕಿಸ್ತಾನದ ಮೇಲೆ ಭಾರತದ ದಾಳಿ ಮುಂದುವರೆದಿದ್ದು, ಭಾರತೀಯ ವಾಯು ಸೇನೆಯು (IAF) ಪಾಕಿಸ್ತಾನದ 8 ಏರ್ ಬೇಸ್ ಗಳನ್ನು ಧ್ವಂಸಗೊಳಿಸಿದೆ.
ಹೌದು ಪಾಕಿಸ್ತಾನದ 8 ವಾಯು ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಪಾಕಿಸ್ತಾನದ ನೂರ್ ಖಾನ್ ವಾಯು ನೆಲೆ, ಮುರಿದ್ ವಾಯುನೆಲೆ, ರಫೀಕಿ ಏರ್ ಬೇಸ್, ರಹ್ಮ್ ಯಾರ್ ಖಾನ್ ವಾಯುನೆಲೆ, ರಗೋದಾ ಏರ್ಬೇಸ್, ಸುಕ್ಕೂರು ವಾಯುನೆಲೆ, ಚೂನಿಯನ್ ವಾಯುನೆಲೆ ಹಾಗು ಸಿಯಾಲ್ ಕೋಟ್ ವಾಯುನೆಲೆಯನ್ನು ಭಾರತೀಯ ವಾಯು ಸೇನೆಯು ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ 8 ವಾಯು ನೆಲೆಯನ್ನು ಐಎಎಫ್ ಇದೀಗ ಧ್ವಂಸಗೊಳಿಸಿದೆ.