ಧಾರವಾಡ: ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಒಗೆನ್ನವರ(28)ಮೃತ ಮಹಿಳೆಯಾಗಿದ್ದು, ಸುರೇಶ ಒಗೆನ್ನವರ, ಶ್ರೀಧರ ಒಗೆನ್ನವರ, ಚಿನ್ನಪ್ಪ ಒಗೆನ್ನವರ ಹಾಗೂ ಗಂಗವ್ವ ಒಗೆನ್ನವರ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಡುಗೆ ಮನೆಯಲ್ಲೇ ಇದ್ದ ಮಹಿಳೆ ಮಹಾದೇವಿ ಹೊರಗಡೆ ಬರಲಾಗದೇ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ. ಇದರಿಂದ ಮಹಾದೇವಿ ದೇಹ ಸಂಪೂರ್ಣ ಬೆಂದು ಹೋಗಿದೆ. ಉಳಿದವರು, ಹಾಗೋ ಹೀಗೋ ಮಾಡಿ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ. ಅಕ್ಕಪಕ್ಕವೇ 2-3 ಸಿಲಿಂಡರ್ಗಳಿದ್ದವು. ಆದರೆ ಅವುಗಳಿಗೆ ಬೆಂಕಿ ತಗುಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.