ವಿಜಯಪುರ : ಇಂದು ರಾಜ್ಯಾದಂತ್ಯ ಮೊಹರಂ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತ್ತಿದ್ದೂ, ಕೆಲವು ದುರಂತಗಳು ಕೂಡ ಸಂಭವಿಸಿವೆ. ವಿಜಯಪುರದಲ್ಲಿ ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶದಿಂದ ಓರ್ವ ಸಾವು ವಾಹನ ಚಾಲಕ ಮೊಹಮ್ಮದ್ ಇನಾಂದಾರ್ (40) ಎನ್ನುವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರದ ನಗರದ ಮೆಹತರ್ ಮಹಲ್ ಎದುರು ನಡೆದಿದೆ.
ಎದುರಿಗೆ ಬರುತ್ತಿದ್ದ ಕಾರಿಗೆ ದಾರಿ ಬಿಡಲು ಚಾಲಕ ಸೈಡ್ ಗೆ ವಾಹನ ತೆಗೆದುಕೊಂಡಿದ್ದ, ಈ ವೇಳೆ ಟ್ರಾನ್ಸ್ಫರ್ ಮರ್ಗೆ ವಾಹನ ತಗುಲಿದರಿಂದ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ. ವಿದ್ಯುತ್ ಸ್ಪರ್ಶದಿಂದ ಮತ್ತೊರ್ವ ಸಾದಿಕ್ ಎಂಬಾತ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗದ್ದು, ಸ್ಥಳಕ್ಕೆ ಗೋಲಗುಂಬಜ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.