ಬೆಳಗಾವಿ : ಕಳೆದ ವರ್ಷ ರಾಜ್ಯದಲ್ಲಿ ಬಳ್ಳಾರಿ ಬೆಳಗಾವಿ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೆಳೆಸಿದ್ದು ಇದೀಗ ಬೆಳಗಾವಿಯ ಬಿಮ್ಸ್ ನಲ್ಲಿ ಮತ್ತೊರ್ವ ಬಾಣಂತಿಯ ಸಾವಾಗಿರುವುದು ಪ್ರಕರಣ ವರದಿಯಾಗಿದೆ.
ಮೃತ ಬಾಣಂತಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲಗಮೇಶ್ವರ ಗ್ರಾಮದ ಕೀರ್ತಿ ನೇಸರಗಿ(19) ಮೃತ ಬಾಣಂತಿ ಎನ್ನಲಾಗಿದ್ರ್. ಕೀರ್ತಿಗೆ ಎರಡು ದಿನದ ಹಿಂದೆ ವೈದ್ಯರು ಸಿಜರಿನ್ ಮಾಡಿ ಹೆರಿಗೆ ಮಾಡಿದ್ದರು. ಆದರೆ ಕೀರ್ತಿಗೆ ತೀವ್ರ ರಕ್ತಸ್ರಾವವಾಗಿ ಇದೀಗ ಸಾವನಪ್ಪಿದ್ದಾರೆ.
ಬಾಣಂತಿ ಕೀರ್ತಿಗೆ ರಕ್ತಸ್ರಾವ ಆಗುತ್ತಿದ್ದರೂ ಕೂಡ ಯಾವುದೇ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸದೆ ವಾರ್ಡ್ ಗೆ ಶಿಫ್ಟ್ ಮಾಡಿದ್ದರು. ಹಾಗಾಗಿ ಕೀರ್ತಿ ಸಾವನಪ್ಪಿದ್ದಾಳೆ ಎಂದು ಮೃತ ಕೀರ್ತಿಯ ಕುಟುಂಬಸ್ಥರು ವೈದ್ಯರ ವಿರುದ್ಧ ಗಂಭೀರವಾದ ಆರೋಪ ಮಾಡುತ್ತಿದ್ದಾರೆ. ಘಟನೆ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.