ಮಂಗಳೂರು : ಕಳೆದ ವರ್ಷ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಅಕ್ರಮ-ಪಾಕಿಸ್ತಾನ, ಬಾಂಗ್ಲಾ ವಲಸಿಗರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಇಂದು ಮಂಗಳೂರಲ್ಲಿ ಮತ್ತೊರ್ವ ಅಕ್ರಮ ಬಾಂಗ್ಲಾ ವಲಸಿಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಬಾಂಗ್ಲಾ ಪ್ರಜೆಯನ್ನು ಅನುರುಲ್ ಶೇಖ್ ಎಂದು ಗುರುತಿಸಲಾಗಿದೆ. ಈತ ಮಂಗಳೂರು ಹೊರವಲಯದ ಮುಕ್ಕ ಗ್ರಾಮದಲ್ಲಿ ನೆಲೆಸಿದ್ದ. ಬಾಂಗ್ಲಾದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್ ನನ್ನು (25) ಅರೆಸ್ಟ್ ಮಾಡಲಾಗಿದೆ. ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಮಂಗಳೂರು ಪೊಲೀಸರಿಂದ ಪ್ರಜೆಯನ್ನು ಅರೆಸ್ಟ್ ಮಾಡಲಾಗಿದೆ ಎನ್ನಲಾಗಿದೆ.
ಕಳೆದ ಮೂರು ವರ್ಷದಿಂದ ಕಟ್ಟಡ ಕಾರ್ಮಿಕನಾಗಿ ಅಕ್ರಮವಾಗಿ ನೆಲೆಸಿದ್ದ. ಮೂರು ವರ್ಷದ ಹಿಂದೆ ಅಕ್ರಮವಾಗಿ ಭಾರತ ಗಡಿಯನ್ನು ಪ್ರವೇಶಿಸಿದ್ದ. ಭಾರತ ಮತ್ತು ಬಾಂಗ್ಲಾ ಅಂತರಾಷ್ಟ್ರೀಯ ಗಡಿರೇಖೆ ಲಾಲ್ ಗೋಲ್ ಮೂಲಕ ಶೇಕ್ ಪ್ರವೇಶ ಮಾಡಿದ್ದಾನೆ.
ಪಶ್ಚಿಮ ಬಂಗಾಳದ ಮರುಶಿದಾಬಾದ್ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾನೆ ಎಂದು ತಿಳಿದುಬಂದಿದೆ.ಅಲ್ಲಿಂದ ಕರ್ನಾಟಕದ ಉಡುಪಿಗೆ ಬಂದು ಅನರುಲ್ ಶೇಕ್ ನೆಲೆಸಿದ್ದಾನೆ. ನಂತರ ಮಂಗಳೂರಿನ ಮುಖ್ಯ ಗ್ರಾಮದ ರೋಹನ್ ಎಸ್ಟೇಟ್ ನಲ್ಲಿ ನೆಲೆಸಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಪೊಲೀಸರು ಬಾಂಗ್ಲಾ ಪ್ರಜೆಯನ್ನು ಬಂಧಿಸಿದ್ದಾರೆ.