ತುಮಕೂರು : ಮದುವೆಯಾದ ಬಳಿಕ ಕೇವಲ ಒಂದುವರೆ ವರ್ಷದಲ್ಲಿ ಯುವತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ.ಮೃತ ಯುವತಿಯನ್ನು ಕಲಾವತಿ (28) ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಕಲಾವತಿ ಕಳೆದ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದಳು. ಆದರೆ ಇಂದು ಕಲಾವತಿ ನಿಗೂಢವಾಗಿ ಸಾವನಪ್ಪಿದ್ದು, ಪತಿಯ ಪೋಷಕರ ವಿರುದ್ಧ ಮೃತಳ ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ. ಕಲಾವತಿ ಪತಿ ನರಸಿಂಹಮೂರ್ತಿ, ನಾದಿನಿ ರೂಪ ಹಾಗೂ ಮೋಹನ್ ಎಂಬುವರ ಮೇಲೆ ಮೃತಳ ಪೋಷಕರಿಗೆ ಆರೋಪ ಮಾಡಿದ್ದಾರೆ.
ಘಟನೆ ಬಳಿಕ ಕಲಾವತಿ ಪತಿಯ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಫೆಬ್ರುವರಿ 26ರಂದು 112ಕ್ಕೆ ಕರೆ ಮಾಡಿದ್ದ ಕಲಾವತಿ ಮೊಬೈಲ್ ಕಳೆದಿದೆ ಅಂತ ಕಲಾವತಿ ದೂರು ನೀಡಿದ್ದಳು. ಅಂದಿನಿಂದಲೇ ಕಲಾವತಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಲ್ಲಿಯೇ ಕಲಾವತಿ ನಿಗೂಢವಾಗಿ ಸವನಪ್ಪಿದ್ದಾಳೆ. ಈ ವೇಳೆ ನಿಮ್ಹಾನ್ಸ್ ಆಸ್ಪತ್ರೆಗೆ ವೈದರು ಹೃದಯಘಾತದಿಂದ ಸಾವನಪ್ಪಿದ್ದಾಳೆ ಎಂದು ತಿಳಿಸಿದ್ದು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.