ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಒಂದು ವರ್ಷದ ಎಂಟು ತಿಂಗಳಿನ ಮಗು ಬಲಿಯಾಗಿದೆ. ಪ್ರಣವ್ ಎನ್ನುವ ಮಗು ದಾರುಣವಾಗಿ ಸಾವನಪ್ಪಿದೆ. ನವೆಂಬರ್ 7ರಂದು ಕುಂದಲಹಳ್ಳಿ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ.
ಮೋಲ್ಡಿಂಗ್ ಮುಗಿಸಿ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಿದ್ಯುತ್ ತಂತಿ ಎಳೆದಿದ್ದು, ವೈರಿಂಗ್ ಕಂಬ ಕಿತ್ತು ಬಂದು ಮನೆ ಗೋಡೆ ಕುಸಿದಿದೆ. ಆಟ ಆಡುತ್ತಿದ್ದ ಮಗು ಮೇಲೆ ಮನೆಯ ಗೋಡೆ ಅವಶೇಷ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ಕರೆದೋಯುವಷ್ಟರಲ್ಲಿಯೇ ಪ್ರಣವ್ ಸಾವನ್ನಪ್ಪಿದ್ದಾನೆ. ಘಟನೆಯ ಬಳಿಕ ಕಾಂಕ್ರೀಟ್ ಮಿಕ್ಸರ್ ಚಾಲಕ ಪರಾರಿಯಾಗಿದ್ದಾನೆ.








