ಬೆಂಗಳೂರು : ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಹಾಗು ಸಿನಿಮಾ ಮತ್ತು ಕಿರುತೆರೆ ನಟ ಗವಿಸ್ವಾಮಿ ಅವರ ಪುತ್ರ ಆರ್ಯನ್ ಗವಿಸ್ವಾಮಿ ವಸ್ತ್ರದ (22) ಸಾವನಪ್ಪಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಆರ್ಯನ್ ಸಾವನ್ನಪ್ಪಿದ್ದಾರೆ.
ನಟ ಗವಿಸ್ವಾಮಿ ವಸ್ತ್ರದ ಅವರ ಪುತ್ರ ಆರ್ಯನ್(22) ಅವರು ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ಯನ್ ತನ್ನ ಜನ್ಮ ದಿನದಂದೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ದುಃಖ, ನೋವು ತರಿಸಿದೆ.
ಸಾವಿನಲ್ಲೂ ಸಾರ್ಥಕತೆ
ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಪ್ರ್ಯಾಂಕ್ರಿಯ್ಸ್, ಹೃದಯದ ಕವಟಗಳನ್ನು ದಾನ ಮಾಡಲಾಗಿದೆ. ಮತ್ತೊಂದು ಜೀವಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಗನ ಅಂಗಾಂಗಗಳನ್ನು ದಾನ ಮಾಡಲಾಗಿದೆ ಎಂದು ಗವಿಸ್ವಾಮಿ ವಸ್ತ್ರದ ತಿಳಿಸಿದರು. ಆರ್ಯನ್ ಅವರಿಗೆ ಅಜ್ಜಿ, ತಂದೆ, ತಾಯಿ ಇದ್ದಾರೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.








