ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಸೈಬರ್ ಕ್ರೈಂ ಠಾಣೆ ಪೋಲಿಸರು 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಹಿನ್ನೆಲೆ ನಟಿ ರಮ್ಯಾ ಇಂದು ಬೆಂಗಳೂರಿನ 46ನೇ ಸಿಸಿಎಚ್ ಕೋರ್ಟಿಗೆ ಹಾಜರಾಗಿದ್ದಾರೆ.
ಸಾಕ್ಷಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ವೃತ್ತಿ ಜೀವನ, ರಾಜಕೀಯ ಜೀವನದ ಮಾಹಿತಿಯನ್ನು ಕೋರ್ಟ್ ಗೆ ರಮ್ಯಾ ನೀಡಿದರು. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಆಶ್ಲೀಲ ಸಂದೇಶ ಬಂದಿರುವ ಕುರಿತು ಸಾಕ್ಷಿ ಹೇಳಿಕೆ ನೀಡಿದರು. ಆರೋಪಿಗಳು ಇನ್ಸ್ಟಾಗ್ರಾಮ್ ಮೂಲಕ ಕಳುಹಿಸಿದ್ದ ಸಂದೇಶದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸೂಕ್ಷ್ಮ ಪ್ರಕರಣವೆಂದು ಮುಚ್ಚಿದ ಕೊಠಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಜಡ್ಜ್ ಈ ರಾಜೀವ್ ಗೌಡ ಇನ್ ಕ್ಯಾಮೆರಾ ಪ್ರೊಸಿದಿಂಗ್ಸ್ ನಡೆಸಿದರು.








