ಬೆಳಗಾವಿ : ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಸದನದಲ್ಲೂ ಕೂಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮತ್ತೆ ಕುರ್ಚಿಯ ವಿಚಾರವಾಗಿ ಜಟಾಪಟಿ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಈಗ ನಾನು ಸಿಎಂ ಆಗಿದ್ದೇನೆ ಮುಂದೇನು ನಾನೇ ಇರುತ್ತೇನೆ ಎಂದು ಮತ್ತೆ ಗುಡುಗಿದ್ದಾರೆ.
ಸದನದಲ್ಲಿ ನಾಯಕತ್ವ ವಿಚಾರವಾಗಿ ಚರ್ಚೆ ನಡೆಯುವ ವೇಳೆ ನಾಯಕತ್ವ ಬದಲಾವಣೆ ಇದು ನಮ್ಮ ಪಕ್ಷದ ವಿಚಾರ. ಏನೇ ಇದ್ದರು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ನಾನು ಸಿಎಂ ಆಗಿದ್ದೇನೆ ಮುಂದೆಯೂ ನಾನೇ ಇರುತ್ತೇನೆ ಎಂದರು. ಈ ವೇಳೆ ಈಗ ಉತ್ತರ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡುತ್ತಿರಲ್ವಾ ಅದನ್ನು ಜಾರಿ ಮಾಡಲು ನೀವೇ ಇರಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು. ಸುನಿಲ್ ಕುಮಾರ್ ಮಾತಿಗೆ ನಾನೇ ಇರುತ್ತೇನೆ ಎಂದು ಸಿಎಂ ಪ್ರತ್ಯುತ್ತರ ನೀಡಿದರು.








