ಬೆಂಗಳೂರು : ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿಯ ಎಂಎಲ್ಸಿ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿಯಾಗಿದೆ.
ಹೌದು ಸಿಐಡಿ ಡಿವೈಎಸ್ಪಿ ಪಿ. ಕೇಶವಮೂರ್ತಿ ಅವರಿಂದ ಯತಿಂದ್ರರಿಗೆ ನೋಟಿಸ್ ನೀಡಲಾಗಿದ್ದು, ಶಿಕ್ಷಕರ ಕ್ಷೇತ್ರದಿಂದ ಎಂಎಲ್ಸಿ ಆಗಿ ಆಯ್ಕೆಯಾಗಿದ್ದ ಶ್ರೀನಿವಾಸಗೂ ನೋಟಿಸ್ ನೀಡಲಾಗಿದೆ. ಅಲ್ಲದೇ ಕಲಬುರ್ಗಿ ಮೂಲದ ಎಂಎಲ್ಸಿ ಬೇಗಂಗು ಸಿಐಡಿನ ನೋಟಿಸ್ ನೀಡಲಾಗಿದೆ. ಯತೀಂದ್ರ ಸಿದ್ದರಾಮಯ್ಯ ಈ ಒಂದು ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಇದುವರೆಗೂ ಎಂಎಲ್ಸಿ ಉಮಾಶ್ರೀ ರಾಮಾಜಿ ಹಾಗೂ ನಾಗರಾಜ್ ಯಾದವ್ ಅವರ ವಿಚಾರಣೆ ನಡೆಸಿ ಸೆಕ್ಷನ್ 161ರ ಅಡಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇಂದು ಮತ್ತೆ ಮೂರು ಎಂಎಲ್‌ಸಿಗಳ ಹೇಳಿಕೆಗಳನ್ನು ಸಿಐಡಿ ಅಧಿಕಾರಿ ದಾಖಲಿಸಿಕೊಳ್ಳಲಿದ್ದು, ಇದೇ ಕೆಲಸ ಸಂಬಂಧ ಕೋರ್ಟ್ ಮೂಲಕ ಸಿ ಟಿ ರವಿಗೆ ಸಿಐಡಿ ನೋಟಿಸ್ ನೀಡಿದೆ. ತನಿಖೆಗೆ ಸಹಕರಿಸಬೇಕು ಎಂದು ಸಿಐಡಿ ನೋಟಿಸ್ ನೀಡಿದೆ ನೋಟಿಸ್ ಸಂಬಂಧ ಇಂದು ಸಿಟಿ ರವಿ ಕೋರ್ಟಿಗೆ ಹಾಜರಾಗಲಿದ್ದಾರೆ. ಬೆಂಗಳೂರಿನ 42ನೇ ಸಿಸಿಎಚ್ ಕೋರ್ಟ್ ನಿಂದ ಸಿ ಟಿ ರವಿಗೆ ನೋಟಿಸ್ ನೀಡಲಾಗಿದೆ.