ಬೆಂಗಳೂರು : ಈಗಾಗಲೇ ಐಪಿಎಲ್ ಹಬ್ಬ ಶುರುವಾಗಿದ್ದು, ಹಲವು ಮ್ಯಾಚ್ ಗಳು ಮುಗಿದಿವೆ. ಇನ್ನು ಇದೇ ಒಂದು ಐಪಿಎಲ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತದೆ. ಇದೀಗ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಐಪಿಎಲ್ ಬೆಟ್ಟಿಂಗ್ಗಳನ್ನು ಪ್ರಮೋಷನ್ ಮಾಡುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಮ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ.
ಹೌದು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಎನಿಸಿಕೊಂಡಿರೋ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ. ಇವರ ಇನ್ಸ್ಟಾಗ್ರಾಂ ಚಟುವಟಿಕೆಗಳನ್ನು ನೋಡಿ ಈ ವಾರ್ನಿಂಗ್ ನೀಡಲಾಗಿದೆ.ಇದು ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಚಟುವಟಿಕೆ ಗಮನಿಸಿರುವ ಪೊಲೀಸರು ಕರೆ ಮಾಡಿ ಇವರುಗಳನ್ನು ವಿಚಾರಣೆಗೆ ಪೊಲೀಸರು ಕರೆದಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜನ ರೀಲ್ಸ್ ಇನ್ಫ್ಲುಯೆನ್ಸರ್ಗಳ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೇವಲ ಬೆಂಗಳೂರಿನವರು ಮಾತ್ರ ಇಲ್ಲ. ಮಂಗಳೂರು, ಮಂಡ್ಯ, ಹುಬ್ಬಳ್ಳಿ ಎಲ್ಲಾ ಜಿಲ್ಲೆಗಳ ಇನ್ಫ್ಲುಯೆನ್ಸರ್ಗಳ ಕರೆಸಿ ವಿಚಾರಣೆ ಮಾಡಿದ್ದಾರೆ. ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ಖಡಕ್ ವಾರ್ನ್ ಮಾಡಿ ಕಳುಹಿಸಲಾಗಿದೆ.