ಕೋಲಾರ : ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್ನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಅದರಲ್ಲಿ ಬದುಕುಳಿದು ಬಂದಂತಹ ವಿದ್ಯಾರ್ಥಿನಿಯಾದ ಪಲ್ಲವಿ ಸಮುದ್ರದ ಅಲೆಗಳ ಹೊಡೆತಕ್ಕೆ ನಾವು ನಾಲ್ಕಲ್ಲ 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು ಎಂದು ಕಣ್ಣೆದುರಿಗೆ ನಡೆದ ನೈಜ ಘಟನೆ ವಿವರಿಸಿದ್ದಾಳೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ದೊಡ್ಡ ದೊಡ್ಡ ಅಲೆಗಳಿಗೆ 15 ಜನರು ಸಮುದ್ರದ ಅಲೆಗಳ ಮಧ್ಯ ಸಿಲುಕಿಕೊಂಡಿದ್ದರು. ಈ ವೇಳೆ ನಾವು ನಾಲ್ವರು ಅಲ್ಲ ಸುಮಾರು 15 ಜನರು ಸಿಲುಕಿಕೊಂಡಿದ್ದೆವು. ಕೂಡಲೇ ಅಲ್ಲಿದ್ದ ಸ್ಥಳೀಯ ಲೈಫ್ ಗಾರ್ಡ್ಸ್ ಸಿಬ್ಬಂದಿ ಹಾಗೂ ಶಿಕ್ಷಕರು ಉಳಿದವರನ್ನು ಕಾಪಾಡಿದರು ಆದರೆ ನಾಲ್ವರು ಮಾತ್ರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಿಗೆ ವಿದ್ಯಾರ್ಥಿನಿ ಪಲ್ಲವಿ ಮಾಹಿತಿ ನೀಡಿದ್ದಾಳೆ.
ಅಲ್ಲದೆ ಇಂದು ಮೃತ ನಾಲ್ವರು ವಿದ್ಯಾರ್ಥಿನಿಯರ ಮೃತದೇಹಗಳು ಸ್ವ ಗ್ರಾಮಕ್ಕೆ ರವಾನಿಸಿದ್ದು, ವಿದ್ಯಾರ್ಥಿಯ ನೇರ ಮೃತ ದೇಹಗಳನ್ನು ಕಂಡ ಕೂಡಲೇ ಅವರ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿತು ಇಂದು ಅವರವರ ಊರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಮೃತ ವಿದ್ಯಾರ್ಥಿನಿಯರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.