ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಮತ್ತೊಮ್ಮೆ ಬಯಲಾಗಿದ್ದು ಜೈಲಿನಲ್ಲಿ ಉಮೇಶ್ ರೆಡ್ಡಿ ಹಾಗೂ ಭಯೋತ್ಪಾದಕರು ಸೇರಿದಂತೆ ಹಲವು ಕೈದಿಗಳ ಕೈಯಲ್ಲಿ ಮೊಬೈಲ್ ಕಂಡುಬಂದಿದ್ದು ಈ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿ ಇದಕ್ಕೆ ಯಾರು ಹೊಣೆಗಾರರಾಗಿದ್ದಾರೆ. ಅಂಥವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಇವಂದು ಘಟನೆಗಳು ಮಂಗಳೂರು ಬೆಳಗಾವ್ ಸೇರಿದಂತೆ ಬಹಳ ಕಡೆ ಆದ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪದೇಪದೇ ಆಗಿದ್ದು ಕೇಳಿಬಂದಿದ್ದು ಇದೇ ಕೂಡ ಇದೇ ರೀತಿಯಾದಾಗ ಕೆಲವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಎಡಿಜಿಪಿ ಬಿ ದಯಾನಂದ ಜೊತೆಗೆ ನಾನು ಮಾತನಾಡಿದ್ದೇನೆ ಯಾರು ಹೊಣೆಗಾರರಾಗಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೂಪರಿಟೆಂಡೆಂಟ್ ಮತ್ತು ಕೆಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೂಡಲೇ ವರದಿ ನೀಡುವಂತೆ ನಾನು ಸೂಚನೆ ನೀಡಿದ್ದೇನೆ. ಮೊಬೈಲ್ ಇತರೆ ಫೆಸಿಲಿಟಿ ಯಾರಿಗೂ ಕೊಡುವ ಹಾಗಿಲ್ಲ ಇದನ್ನು ನಾವು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇವೆ ಫೆಸಿಲಿಟಿ ಕೊಟ್ಟರೆ ಜೈಲು ಅಂತ ಹೇಗೆ ಅನ್ನಿಸಿಕೊಳ್ಳುತ್ತದೆ ಉಗ್ರ ಮಾತ್ರವಲ್ಲ ಯಾರಿಗೂ ರಾಜಾತಿಥ್ಯ ನೀಡಂಗಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದರು.
ಇನ್ನು ನಟ ದರ್ಶನ್ ವಿಚಾರವಾಗಿ ಮಾತನಾಡಿದ ಅವರು ಹಾಸಿಗೆ ದಿಂಬಿಗಾಗಿ ದರ್ಶನ್ ಕೋರ್ಟಿಗೆ ಹೋಗಬೇಕಾಯಿತು. ಕೈದಿಗಳಿಗೆ ಸುಲಭವಾಗಿ ಸಿಗುತ್ತೆ ಅನ್ನೋದನ್ನು ನೋಡಿದ್ದೇವೆ. ಎಲ್ಲವನ್ನು ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.







