ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಪೂಜೆ ಮುಂದುವರೆಯಲಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಮುಸ್ಲಿಂ ಕಡೆಯವರಿಗೆ ಮತ್ತೆ ಹಿನ್ನೆಡೆಯಾಗಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಯೊಳಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಗೆ ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಇದಕ್ಕೂ ಮುನ್ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಜ್ಞಾನವಾಪಿ ಮಸೀದಿ ಆವರಣದ ಒಳಗೆ ಮತ್ತು ಹೊರಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಡ್ವೊಕೇಟ್ ಜನರಲ್ಗೆ ಆದೇಶಿಸಿತ್ತು. ಇನ್ನು ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6ಕ್ಕೆ ಮುಂದೂಡಿತ್ತು. ಸಧ್ಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪೂಜೆಗೆ ಯಾವುದೇ ನಿರ್ಬಂಧವಿಲ್ಲ ಎಂದಿದೆ.
UPDATE : ಮಧ್ಯಪ್ರದೇಶದ ‘ಪಟಾಕಿ ಕಾರ್ಖಾನೆ’ಯಲ್ಲಿ ಸ್ಫೋಟ : 7 ಮಂದಿ ಸಜೀವ ದಹನ, 100ಕ್ಕೂ ಹೆಚ್ಚು ಜನರಿಗೆ ಗಾಯ
‘ಲಿವ್ ಇನ್ ಸಂಬಂಧ’ ನೋಂದಣಿ ಕಡ್ಡಾಯ, ಇಲ್ಲದಿದ್ರೆ 6 ತಿಂಗಳು ಜೈಲು : ಉತ್ತರಾಖಂಡದಲ್ಲಿ ಹೊಸ ಕಾನೂನು ಜಾರಿ
BIGG NEWS : 2045ರ ವೇಳೆಗೆ ಭಾರತದ ‘ಇಂಧನ’ ಬೇಡಿಕೆ ದುಪ್ಪಟ್ಟು : ಪ್ರಧಾನಿ ಮೋದಿ