ಬೀದರ್ : ರಾಜ್ಯ ರಾಜಕಾರಣದಲ್ಲಿ ದಿನವೊಂದಕ್ಕೆ ಅಚ್ಚರಿ ಬೆಳವಣಿಗೆ ನಡೆಯುತ್ತಿದ್ದು ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಆತುರದಲ್ಲಿ ಇದ್ದರೆ, ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ. ನಾನೇ ಐದು ವರ್ಷ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ಕೋಡಿಮಠದ ಸ್ವಾಮೀಜಿ ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಹೌದು ರಾಜ್ಯದ ರಾಜಕೀಯದಲ್ಲಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗಲ್ಲ. ಯುಗಾದಿವರೆಗೂ ಸರ್ಕಾರ ಏನೂ ಬದಲಾವಣೆ ಆಗೋದಿಲ್ಲ ಸಿಎಂ ಬದಲಾವಣೆ ಅನ್ನೋದು ಊಹಾಪೋಹ ಅಷ್ಟೇ. ಸಂಕ್ರಾಂತಿ ಫಲದಲ್ಲಿ ಸಿಎಂ ಬದಲಾವಣೆ ಇಲ್ಲ. ಅವರಾಗಿಯೇ ಬಿಟ್ಟುಕೊಟ್ಟರೆ ಬೇರೆಯವರು ಸಿಎಂ ಆಗಬಹುದು. ಆದರೆ, ಸಿಎಂ ಸಿದ್ದರಾಮಯ್ಯ ಬದಲಾವಣೆ ಯಾರ ಕೈಯಲ್ಲೂ ಮಾಡೋಕೆ ಆಗಲ್ಲ ಎಂದು ಬೀದರ್‌ನಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದ್ದಾರೆ.
ಅವರು ಬಿಟ್ಟು ಕೊಡಲ್ಲ, ಇಳಿಯೋದು ಇಲ್ಲ. ಯುಗಾದಿ ಕಳೆದ ಮೇಲೆ ಸಿಎಂ ಬದಲಾವಣೆ ಬಗ್ಗೆ ಹೇಳ್ತೇನೆ. ಸಿಎಂ ಆಗಬೇಕಿರುವ ಡಿ.ಕೆ.ಶಿವಕುಮಾರ್ ನಮಗೆ ಬೇಕಾದವರು. ಆದರೆ, ಸಿಎಂ ರೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಇನ್ನೂ ಹಲವರು ಇದ್ದಾರೆ. ದಿವ್ಯ ಯೋಗ ಯಾರಿಗೆ ಇದೆಯೋ ಅವರು ಸಿಎಂ ಆಗುತ್ತಾರೆ. ಆದರೆ, ಸಿಎಂ ಅವರನ್ನು ಸದ್ಯಕ್ಕೆ ಇಳಿಸೋದು ಕಷ್ಟ ಎಂದ ಶ್ರೀಗಳು ಹೇಳಿದ್ದಾರೆ.








