ಬೆಂಗಳೂರು : ಮೆಟ್ರೋ ಟಿಕೆಟ್ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಇದೀಗ ತನ್ನ ವ್ಯಾಪ್ತಿಯ ಶೌಚಾಲಯ ಬಳಕೆಗೂ ಶುಲ್ಕ ನಿಗದಿ ಪಡಿಸಿತ್ತು. ಬಿಎಂಆರ್‌ಸಿಎಲ್’ನ ಈ ನಡೆಯು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ BMRCL ಈ ಕುರಿತು ಸ್ಪಷ್ಟನೆ ನೀಡಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆ ಉಚಿತವಾಗಿರುತ್ತದೆ. ಮೆಟ್ರೋ ಸ್ವೈಪ್ ಗೇಟ್ ಒಳಗಿನ ಶೌಚಾಲಯಗಳ ಬಳಕೆ ಉಚಿತವಾಗಿರುತ್ತದೆ. ಮುಂದೆಯೂ ಕೂಡ ಶೌಚಾಲಯ ಬಳಕೆ ಉಚಿತವಾಗಿರುತ್ತದೆ. ಮೆಟ್ರೋ ಸ್ವೈಪ್ ಗೇಟ್ ಗಿಂತ ಹೊರಗಿರುವ ಶೌಚಾಲಯಗಳನ್ನು ಮೆಟ್ರೋ ಪ್ರಯಾಣಿಕರಲ್ಲದೆ ಬೇರೆ ಸಾರ್ವಜನಿಕರು ಸಹ ಬಳಸುತ್ತಾರೆ. ಅಂತಹ ಶೌಚಾಲಯಗಳು ಮಾತ್ರ ಶುಲ್ಕ ನಿಗದಿ ಮಾಡಲಾಗಿದೆ ಎಂದು ಶೌಚಾಲಯ ಬಳಕೆಗೆ ಶುಲ್ಕ ವಿಚಾರದ ಬಗ್ಗೆ ಇದೀಗ BMRCL ಸ್ಪಷ್ಟನೆ ನೀಡಿದೆ.