ಬೆಂಗಳೂರು : ಬೆಂಗಳೂರಿನಲ್ಲಿ ಹೆಬ್ಬಗೋಡಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೆ ವೇಳೆ ಬಂದಿದ್ದ ಆರೋಪಿಯಿಂದ ಒಟ್ಟು ಹದಿನಾಲ್ಕು ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಜ್ ಮಾಡಿದ್ದಾರೆ.
ಹೌದು ಕಳೆದ 12 ವರ್ಷಗಳಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಪ್ರಜೆ ಇಮ್ಯಾನುಯೆಲ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಮ್ಯಾನುಯೆಲ್ 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಡ್ರಗ್ ಪೆಡ್ಲಿಂಗ್ ದಂಧೆ ಶುರು ಮಾಡಿದ್ದ. ಆತ ಭಾರತೀಯ ಮಹಿಳೆಯನ್ನು ಮದುವೆಯಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಬೆಂಗಳೂರಿನ ಹೆಬ್ಬಗೋಡಿ ಪೋಲೀಸರು ಇದೀಗ ಇಮ್ಯಾನುಯೆಲ್ ನನ್ನ ಅರೆಸ್ಟ್ ಮಾಡಿದ್ದಾರೆ. ಅಲ್ಲದೇ 14 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮಾಡಿದ್ದಾರೆ.
2014ರಲ್ಲಿ ಭಾರತಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಇಮಾನುವಲ್ ಬಿಜಿನೆಸ್ ವಿಸಾದ ಅಡಿ ಭಾರತಕ್ಕೆ ಬಂದಿದ್ದಾನೆ. ಬೆಂಗಳೂರಿಗೆ ಬಂದು ಇಲ್ಲಿನ ಮಹಿಳೆಯನ್ನೇ ಮದುವೆಯಾಗಿದ್ದಾನೆ 4-5 ಮನೆಗಳನ್ನು ಬಾಡಿಗೆ ಪಡೆದು ಆರೋಪಿ ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ ಸಬ್ ಪೆಡ್ಲರ್ಸ್ ಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ. ಹೊರರಾಜ್ಯ ಮತ್ತು ಹೊರದೇಶಗಳಿಂದ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಹೆಬ್ಬಗೋಡಿ ಪೋಲಿಸರು ದಾಳಿ ನಡೆಸಿದ್ದಾರೆ.ಆರೋಪಿಯನ್ನು ಬಂಧಿಸಿ 14 ಕೋಟಿ ರೂಪಾಯಿ ಮೌಲ್ಯದ ಜಪ್ತಿ ಮಾಡಿಕೊಂಡಿದ್ದಾರೆ. ಎಂ ಡಿ ಎಂ ಎ ಎಲ್ ಎಸ ಡಿ ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಅನ್ನು ಸೀಜ್ ಮಾಡಿದ್ದಾರೆ ಡ್ರಗ್ಸ್ ಪ್ರಕರಣದಲ್ಲಿ ಉಳಿದವರಿಗಾಗಿ ಹೆಬ್ಬಗೋಡಿ ಠಾಣೆ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.








