ಉತ್ತರಕನ್ನಡ : ಕಾರವಾರದ ಕದಂಬ ನೌಕಾನೆಲೆಯ ಕೆಲ ರಹಸ್ಯ ಮಾಹಿತಿ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಆಗಸ್ಟ್ 28 ರಂದು ತಾಲ್ಲೂಕಿನ ಮುದಗಾ, ತೊಡೂರು ಮತ್ತು ಅಂಕೋಲಾದ ಮೂವರು ಯುವಕರನ್ನು ವಿಚಾರಣೆ ನಡೆಸಿದ್ದ NIA ತಂಡವು ಈಗ ಪುನಃ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.
ಇಬ್ಬರು ಆರೋಪಿಗಳನ್ನು ಇದೀಗ NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುದುಗ ಗ್ರಾಮದ ನಿವಾಸಿ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯಕ್ನನ್ನು ಎನ್ಐಎ ಅಧಿಕಾರಿಗಳು ಇದೀಗ ಅರೆಸ್ಟ್ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದುಗ ಗ್ರಾಮದಲ್ಲಿ ನಿನ್ನೆ ಇಬ್ಬರ ಬಗ್ಗೆಯೂ ಎನ್ಐಎ ತಂಡ ಮಾಹಿತಿ ಕಲೆಹಾಕಿತ್ತು.
ನೌಕಾನೆಲೆ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕಾರವಾರಕ್ಕೆ ಭೇಟಿ ನೀಡಿದ್ದರು. 2024ರ ಅಗಸ್ಟ್ ತಿಂಗಳಲ್ಲಿ ಎನ್ಐಎ ಅಧಿಕಾರಿಗಳು ಮೂವರನ್ನು ವಿಚಾರಣೆ ನಡೆಸಿದ್ದರು. ಮೂವರ ವಿಚಾರಣೆ ನಡೆಸಿ ನೋಟಿಸ್ ನೀಡಿದ್ದರು. ಮುದುಗ ಗ್ರಾಮದ ವೇತನ್ ತಾಂಡೇಲ್, ತೋಳೂರಿನ ಸುನಿಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯಕನನ್ನು ಎನ್ಐಎ ವಿಚಾರಣೆ ನಡೆಸಿ ಬಿಟ್ಟಿದ್ದರು.
ಇದೀಗ ಪ್ರಕರಣ ಸಂಬಂಧ ತನಿಖೆ ನಡೆಸಲು ಮತ್ತೆ ಅಧಿಕಾರಿಗಳು ಬಂದಿದ್ದಾರೆ.
ಈ ಹಿಂದೆ ಶಂಕಿತ ಆರೋಪಿಗಳ ಹನಿಟ್ರ್ಯಾಪ್ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹನಿಟ್ರ್ಯಾಪ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದ ಪಾಕಿಸ್ತಾನದ ಏಜೆಂಟ್ ಮರೈನ್ ಅಧಿಕಾರಿ ಎಂದು ಪಾಕ್ ಏಜೆಂಟ್ ಪರಿಚಯಿಸಿಕೊಂಡಿದ್ದ. ಫೇಸ್ಬುಕ್ ಮೂಲಕ ಪಾಕಿಂಗ್ ಇವರಿಬ್ಬರನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆ ವೇತನ್, ಸುನಿಲ್, ಅಕ್ಷಯ ನಾಯಕ್ ಮಾಹಿತಿ ಪಡೆದಿದ್ದರು. ಈ ಹಿಂದೆ ಕಾರವಾರದ ಚಂಡ್ಯದಲ್ಲಿರುವ ಮರ್ಕ್ಯೂರಿ ಹಾಗೂ ಅಲ್ಟ್ರಾಮರೈನ್ ಕಂಪನಿಯಲ್ಲಿ ವೇತನ್ ಮತ್ತು ಅಕ್ಷಯ್ ಕೆಲಸ ಮಾಡುತ್ತಿದ್ದರು ಗುತ್ತಿಗೆ ಆಧಾರದಲ್ಲಿ ವೇತನ ಹಾಗೂ ಅಕ್ಷಯ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.