ನವದೆಹಲಿ : ಅಕ್ರಮ ಹಣವನ್ನು ಭಾರತದ ಪಿಎಫ್‌ಐ ಕೇಡರ್‌ಗಳಿಗೆ ಉಗ್ರ ಚಟುವಟಿಕೆಗಾಗಿ ವಿತರಿಸುತ್ತಿದ್ದ ಮೊಹಮ್ಮದ್ ಸಜ್ಜಾದ್ ಆಲಂ ಎಂಬಾತನನ್ನು ಎನ್ ಐಎ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದಾರೆ.
ನಿಷೇಧಿತ ಪಿಎಫ್‌ಐ ಸಂಘಟನೆಯ ಉಗ್ರರಿಗೆ ರಾಜ್ಯದಿಂದ ದುಡ್ಡು ಕಳುಹಿಸುತ್ತಿದ್ದ ಉಗ್ರ ಮೊಹಮ್ಮದ್ ಸಜ್ಜಾದ್ ಅಲಂನನ್ನು ಎನ್‌ಐಎ ಬಂಧಿಸಿದೆ. ನಿಷೇಧಿತ ಪಿಎಫ್‌ಐ ಸಂಘಟನೆಗೆ ದುಬೈನಿಂದ ಹಣ ಸರಬರಾಜು ಮಾಡುತ್ತಿದ್ದ ಆಲಂ ಮೇಲೆ ಈ ಮೊದಲೇ ಅರೆಸ್ಟ್ ವಾರಂಟ್ ಹಾಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.
ದೊಡ್ಡ ಮಟ್ಟದ ಹಣ ದುಬೈನಿಂದ ಕರ್ನಾಟಕಕ್ಕೆ ಬರುತ್ತಿತ್ತು. ದುಬೈನಿಂದ ಬಂದ ಹಣವನ್ನು ವಿವಿಧ ರಾಜ್ಯಗಳಲ್ಲಿರುವ ಪಿಎಫ್‌ಐ ಸಿಂಡಿಕೇಟ್‌ಗಳ ಮೂಲಕ ಉಗ್ರ ಅಲಂ ರವಾನೆ ಮಾಡುತ್ತಿದ್ದ. ಈ ಹಣ ಬಳಸಿಕೊಂಡು ಉಗ್ರ ಚಟುವಟಿಕೆಗಳಿಗೆ ನಿಷೇಧಿತ ಪಿಎಫ್‌ಐ ಬಳಸಿಕೊಳ್ಳುತ್ತಿತ್ತು ಎಂದು ಎನ್‌ಐಎ ತಿಳಿಸಿದೆ.